ಮುಂಬೈ:ವಿಭಿನ್ನ ಪಾತ್ರಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದು ಎಲ್ಲರಿಗೂ ತಿಳಿದು ವಿಚಾರ. ವಾರಗಳ ಹಿಂದಷ್ಟೇ ಸ್ವತಃ ಸೈಫ್ ಪತ್ನಿ ಕರೀನಾ ಕಪೂರ್ ಜೊತೆಗೆ ಎರಡನೇ ಮಗುವಿನ ಆಗಮನದಲ್ಲಿರುವುದಾಗಿ ಹೇಳಿಕೆ ತಿಳಿಸಿದ್ದರು. ಈ ಖುಷಿ ಜೊತೆಗೆ ಅವರು ಮತ್ತೊಂದು ಸಿಹಿಯಾದ ಸುದ್ದಿ ನೀಡಿದ್ದಾರೆ.
ಆತ್ಮಚರಿತ್ರೆ ಬರೆಯಲು ಸಜ್ಜಾದ ಸೈಫ್ ಅಲಿ ಖಾನ್: ಕುತೂಹಲ ಕೆರಳಿಸಿದ ಪುಸ್ತಕದ ಹೆಸರು! - ಆತ್ಮಚರಿತ್ರೆ ಬರೆಯಲು ಸಜ್ಜಾದ ಸೈಫ್ ಅಲಿ ಖಾನ್
ಬಾಲಿವುಡ್ ನಟ ಸೈಫ್ ಅಲಿ ಖಾನ್ ವೃತ್ತಿ ಬದುಕಿನ ನೆನಪುಗಳನ್ನೇ ಕೂಡಿಹಾಕಿ ಆತ್ಮಚರಿತ್ರೆಯೊಂದನ್ನು ಬರೆಯಲು ಸಜ್ಜಾಗಿದ್ದಾರಂತೆ. ತಾವು ನಡೆದು ಬಂದ ಹಾದಿ, ತಮ್ಮ ಖಾಸಗಿ ಜೀವನ ಸೇರಿದಂತೆ ಚಿತ್ರರಂಗದ ಬದುಕಿನ ಹಲವು ವಿಚಾರಗಳನ್ನು ಪುಸ್ತಕ ರೂಪದಲ್ಲಿ ಅಭಿಮಾನಿಗಳಿಗೆ ನೀಡಲಿದ್ದಾರಂತೆ.
ಹೌದು, ಬಣ್ಣದ ಬದುಕಿಗೆ ಬಂದು 25 ವರ್ಷಗಳನ್ನು ಪೂರೈಸಿದ ನಟ ಸೈಫ್ ಅಲಿ ಖಾನ್, ಇದೀಗ ತಮ್ಮ ವೃತ್ತಿ ಬದುಕಿನ ನೆನಪುಗಳನ್ನೇ ಪುಸ್ತಕದ ರೂಪದಲ್ಲಿ ಅಭಿಮಾನಿಗಳ ಕೈಗೆ ನೀಡಲಿದ್ದಾರಂತೆ. ಇದು ಅವರ ಆತ್ಮಚರಿತ್ರೆಯಾಗಲಿದೆ. ಇನ್ನು ಹೆಸರಿಡದ ಈ ಆತ್ಮಚತಿತ್ರೆ 2021ಕ್ಕೆ ಅಭಿಮಾನಿಗಳ ಕೈ ತಲುಪಲಿದೆಯಂತೆ.
ನನ್ನ 50 ವರ್ಷದ ಜೀವನ, ಅನುಭವಗಳು, ಕುಟುಂಬದ ಜೊತೆಗಿದ್ದ ಒಡನಾಟ, ವೃತ್ತಿ ಜೀವನ ಸೇರಿದಂತೆ ಹತ್ತು ಹಲವು ಸಂಗತಿಗಳನ್ನು ಪುಸ್ತಕ ರೂಪದಲ್ಲಿ ಹಂಚಿಕೊಳ್ಳಲು ತಯಾರಿ ನಡೆಸಿದ್ದೇನೆ. ನನ್ನ ಈ ಆತ್ಮಚರಿತ್ರೆ ಮತ್ತೊಬ್ಬರಿಗೆ ಸ್ಫೂರ್ತಿಯಾಗಲಿದೆ ಎಂದ ಮಹಾದಾಸೆಯಿಂದ ಈ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ಅನೇಕ ವಿಷಯಗಳು ನಮಗೆ ತಿಳಿದೂ ತಿಳಿಯದಂತೆ ಮರೆಯಾಗುತ್ತಲಿರುತ್ತವೆ. ಅದನ್ನು ನಾವು ಯಾವುದಾದರೂ ರೂಪದಲ್ಲಿ ದಾಖಲಿಸಿಕೊಳ್ಳಬೇಕು. ಇಲ್ಲದಿದ್ದರೆ ಅವುಗಳು ಮುಂದೆ ಮರೆಯಾಗುವ ಸಾಧ್ಯತೆಗಳು ಹೆಚ್ಚು ಎಂದು ಖಾನ್ ಹೇಳಿದ್ದಾರೆ.