ಹೈದರಾಬಾದ್: ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕರೀನಾ ಇದೇ ತಿಂಗಳು ಎರಡನೇ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದ್ದು ಪತ್ನಿಯ ಮೇಲಿನ ಕಾಳಜಿಗೆ ಸೈಫ್ ಅಲಿಖಾನ್,ಕರೀನಾಗೆ ಹೆರಿಗೆ ಆಗುವವರೆಗೂ ಶೂಟಿಂಗ್ನಿಂದ ಬ್ರೇಕ್ ಪಡೆದಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶೂಟಿಂಗ್ ಬ್ರೇಕ್ ಬಗ್ಗೆ ಮಾತನಾಡಿದ ಸೈಫ್ ಅಲಿ ಖಾನ್, "ಮನೆಯಲ್ಲಿ ಪುಟ್ಟ ಮಗು ಆಗಮನವಾದಾಗ ಯಾರು ತಾನೇ ಮನೆಯಲ್ಲಿರುವುದನ್ನು ಬಿಟ್ಟು ಕೆಲಸಕ್ಕೆ ಹೋಗಲು ಇಷ್ಟ ಪಡುತ್ತಾರೆ...? ನೀವು ಮಗುವಿನ ಬೆಳವಣಿಗೆ ನೋಡಲಿಲ್ಲ ಎಂದರೆ ನೀವು ತಪ್ಪು ಮಾಡುತ್ತಿದ್ದೀರಿ ಎಂದು ಅರ್ಥ. ನಾನು ಈ ಸಮಯವನ್ನು ವ್ಯರ್ಥ ಮಾಡಿಕೊಳ್ಳಲು ಬಯಸುವುದಿಲ್ಲ. 9-5 ಕೆಲಸಕ್ಕೆ ಹೊಂದಿಕೊಳ್ಳುವ ಬದಲು ನಾನು ನಟನಂತೆಯೇ ಬದುಕಲು ಇಷ್ಟಪಡುತ್ತೇನೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅಲ್ಲು ಅರ್ಜುನ್ ಕ್ಯಾರವಾನ್ಗೆ ಲಾರಿ ಡಿಕ್ಕಿ..!
ಸೈಫೀನಾ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಲ್ಪಡುವ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ 2012 ರಲ್ಲಿ ಮದುವೆಯಾದರು. ಸೈಫ್ ಅಲಿ ಖಾನ್ ಮೊದಲ ಪತ್ನಿ ಅಮೃತಾ ಸಿಂಗ್ಗೆ ಇಬ್ರಾಹಿಂ, ಸಾರಾ ಅಲಿ ಖಾನ್ ಹಾಗೂ ಎರಡನೇ ಪತ್ನಿ ಕರೀನಾಗೆ ತೈಮೂರ್ ಎಂಬ ಮಗ ಇದ್ದಾನೆ. ಇದೀಗ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಸೈಫ್ ಅಲಿ ಖಾನ್ ಸದ್ಯಕ್ಕೆ ಓಂ ರೌತ್ ನಿರ್ದೇಶನದ 'ಆದಿಪುರುಷ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದು ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ವಾರದಿಂದ ಚಿತ್ರೀಕರಣ ಆರಂಭವಾಗಿದೆ. 'ಭೂತ್ ಪೊಲೀಸ್' ಚಿತ್ರದಲ್ಲಿ ಕೂಡಾ ಸೈಫ್ ನಟಿಸುತ್ತಿದ್ದು ಅರ್ಜುನ್ ಕಪೂರ್, ಯಾಮಿ ಗೌತಮ್, ಜಾಕ್ವೆಲಿನ್ ಫರ್ನಾಂಡೀಸ್ ಕೂಡಾ ಸೈಫ್ಗೆ ಜೊತೆಯಾಗಿದ್ದಾರೆ.