ಕೇವಲ 5 ದಿನಗಳಲ್ಲಿ 350 ಕೋಟಿ ಮೈಲಿಗಲ್ಲು ದಾಟಿದ ಸಾಹೋ, ಭಾರತದಾದ್ಯಂತ ಅತೀ ಹೆಚ್ಚು ಥಿಯೇಟರ್ಗಳಲ್ಲಿ ತೆರೆಕಂಡು, ಕೇವಲ 5 ದಿನಗಳಲ್ಲಿ 350 ಕೋಟಿ ಗಡಿ ದಾಟುವ ಮೂಲಕ ಬ್ಲಾಕ್ಬಸ್ಟರ್ ಚಿತ್ರ ಎನಿಸಿದೆ.
ವಿಶ್ವದಾದ್ಯಂತ ತೆರೆ ಕಂಡು 350 ಕೋಟಿ ಬಾಚಿ ಮುನ್ನುಗ್ಗುತ್ತಿರುವ 'ಸಾಹೋ'.. ಡಾರ್ಲಿಂಗ್ ಫುಲ್‌ಖುಷ್! - ಶ್ರದ್ಧಾ ಕಪೂರ್
ಪ್ರಭಾಸ್ ಅಭಿನಯದ ಸಾಹೋ ಬಾಕ್ಸಾಫೀಸ್‌ನಲ್ಲಿಅಬ್ಬರಿಸುತ್ತಿದೆ. ವಿಶ್ವದಾದ್ಯಂತ 350 ಕೋಟಿಯ ಮೈಲಿಗಲ್ಲು ದಾಟುವ ಮೂಲಕ ಬಿರುಗಾಳಿ ಎಬ್ಬಿಸಿದೆ. ಈ ಚಿತ್ರ ಜಾಗತಿಕವಾಗಿ ಎರಡು ದಿನಗಳಲ್ಲಿ ಒಟ್ಟು 205 ಕೋಟಿ ಗಳಿಸಿತ್ತು.
ಸಾಹೋ
ಬಾಹುಬಾಲಿಯ ನಂತರ ಪ್ರಭಾಸ್ ನಟಿಸಿದ ಮೊದಲ ಚಿತ್ರವಿದು. ಬಿಟೌನ್ ನಟಿ ಶ್ರದ್ಧಾ ಕಪೂರ್ ತೆಲುಗಿನಲ್ಲಿ ನಟಿಸಿದ ಮೊದಲ ಚಿತ್ರ ಇದಾಗಿದೆ. ಈ ಚಿತ್ರವು ಅಗಸ್ಟ್ 30, 2019 ರಂದು ಅತಿ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗಿ ರೆಕಾರ್ಡ್ ಕಲೆಕ್ಷನ್ಸ್ ಪಡೆದುಕೊಂಡಿತ್ತು.
ಈ ಚಿತ್ರದಲ್ಲಿ ಜಾಕಿಶ್ರಾಫ್, ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಚಂಕಿ ಪಾಂಡೆ, ಮಹೇಶ್ ಮಂಜ್ರೇಕರ್, ಅರುಣ್ ವಿಜಯ್, ಮುರಳಿ ಶರ್ಮಾ ಹಾಗೂ ಮುಂತಾದವರ ಅದ್ಭುತ ನಟನೆಯಿದೆ.