ಕರ್ನಾಟಕ

karnataka

ETV Bharat / sitara

ಬ್ಯಾಡ್​ ಬಾಯ್ ಪ್ರಭಾಸ್​ ಜತೆ ಕುಣಿಯಲು ಜಾಕ್ವೇಲಿನ್ ಪಡೆದದ್ದು ಎಷ್ಟು ಕೋಟಿ ? - ಪ್ರಭಾಸ್​

ಸಾಹೋ ಚಿತ್ರದ ಬ್ಯಾಡ್ ಬಾಯ್​ ಸಾಂಗ್​ಲ್ಲಿ ಪ್ರಭಾಸ್ ಬಿಟೌನ್ ಬ್ಯೂಟಿ ಜಾಕ್ವೇಲಿನ್ ಫರ್ನಾಂಡೀಸ್ ಜತೆ ಕಾಣಿಸಿಕೊಂಡಿದ್ದಾರೆ. ಈ ಸಾಂಗ್​ಗೆ ಅವರು ಪಡೆದ ಸಂಭಾವನೆ ಎಷ್ಟು ಎಂಬುದು ರಿವೀಲ್ ಆಗಿದೆ.

Jacqueline Fernandez

By

Published : Aug 20, 2019, 6:44 PM IST

ನಿನ್ನೆ ಹೊರಬಂದಿರುವ ಸಾಹೋ ಚಿತ್ರದ ಬ್ಯಾಡ್ ಬಾಯ್ ಸಾಂಗ್ ಮಿಂಚಿನ ವೇಗದಲ್ಲಿ ವೀಕ್ಷಣೆಯಾಗುತ್ತಿದೆ.

ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾ ಸಾಹೋ ಇದೇ 30 ರಂದು ದೊಡ್ಡ ಪ್ರಮಾಣದಲ್ಲಿ ರಿಲೀಸ್ ಆಗುತ್ತಿದೆ. ವಿಶ್ವವ್ಯಾಪಿ ತೆರೆಗೆ ಅಪ್ಪಳಿಸುತ್ತಿರುವ ಸಾಹೋ ಚಿತ್ರದ ಹಾಡುಗಳು ಈಗಾಗಲೇ ಸೆನ್ಷೇಷನ್ ಕ್ರಿಯೇಟ್ ಮಾಡಿವೆ.

ನಿನ್ನೆ ಬಿಡುಗಡೆಯಾಗಿರುವ ಚಿತ್ರದ ಮೂರನೇ ಸಾಂಗ್ ಬ್ಯಾಡ್​ ಬಾಯ್​ ಸಿಕ್ಕಾಪಟ್ಟೆ ಕಿಕ್ಕೇರಿಸುತ್ತಿದೆ. ಫುಲ್ ಬೋಲ್ಡ್​ ಆ್ಯಂಡ್ ಹಾಟ್ ಆಗಿ ಮೂಡಿ ಬಂದಿರುವ ಈ ಸಾಂಗ್ ಸಾಹೋಗೆ ಮತ್ತಷ್ಟು ಮೈಲೇಲು ನೀಡಿದೆ. ಈ ಗ್ಲಾಮರ್​ ತುಂಬಿದ ಹಾಡಿನಲ್ಲಿ ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡೀಸ್ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಜತೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ಈ ಸಾಂಗ್​ನಲ್ಲಿ ಕುಣಿಯಲು ಶ್ರೀಲಂಕಾ ಸುಂದರಿ ಜಾಕ್ವೇಲಿನ್ ಪಡೆದಿರುವ ಸಂಭಾವನೆ ಎಷ್ಟು ಎಂಬುದು ರಿವೀಲ್ ಆಗಿದೆ.

ಬ್ಯಾಡ್​ ಬಾಯ್ ಸಾಂಗ್ ಪೋಸ್ಟರ್

350 ಕೋಟಿ ವೆಚ್ಚದಲ್ಲಿ ಸಿದ್ಧವಾಗಿರುವ ಸಾಹೋ ಮೊನ್ನೆಯಷ್ಟೆ ಆಡಿಯೋ ರಿಲೀಸ್​ಗೆ 2.5 ಕೋಟಿ ವೆಚ್ಚ ಮಾಡಿತ್ತು. ಇದೀಗ ಒಂದು ಸಾಂಗ್​ಗೆ ಸಂಭಾವನೆ ರೂಪದಲ್ಲಿ ಜಾಕ್ವೇಲಿನ್​ಗೆ ಎರಡು ಕೋಟಿ ನೀಡಿದೆ ಎನ್ನಲಾಗುತ್ತಿದೆ.

ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸಿರುವ ಸಾಹೋ ಸಿನಿಮಾ ಇದೇ ತಿಂಗಳು ಬಿಡುಗಡೆಯಾಗುತ್ತಿದೆ.

ABOUT THE AUTHOR

...view details