ಹೈದರಾಬಾದ್:ಸುಶಾಂತ್ ಸಾವಿನ ಪ್ರಕರಣದಲ್ಲಿ ಸಿಲುಕಿ ಮುಕ್ತಿಹೊಂದಿದ್ದ ರಿಯಾ ಚಕ್ರವರ್ತಿ ಸಿನಿಮಾ ರಂಗಕ್ಕೆ ಮತ್ತೆ ಕಾಲಿಟ್ಟಿದ್ದಾರೆ. ಈ ವಿಚಾರವನ್ನು ಚಲನಚಿತ್ರ ನಿರ್ಮಾಪಕ ರೂಮಿ ಜಾಫೆರಿ ದೃಢಪಡಿಸಿದ್ದಾರೆ.
ಮತ್ತೆ ಸಿನಿಮಾಕ್ಕೆ ಎಂಟ್ರಿ ಕೊಡಲಿದ್ದಾರೆ ರಿಯಾ: ರೂಮಿ ಜಾಫೆರಿ ಸ್ಪಷ್ಟನೆ - Rumi Jaffery News
ರಿಯಾ ಚಕ್ರವರ್ತಿ ಜೊತೆ ರೊಮ್ಯಾಂಟಿಕ್ ಡ್ರಾಮಾ ನಿರ್ದೇಶನ ಮಾಡಲಿದ್ದೇನೆ ಎಂದು ಸ್ವತಃ ಚಲನಚಿತ್ರ ನಿರ್ಮಾಪಕ ರೂಮಿ ಜಾಫೆರಿ ದೃಢಪಡಿಸಿದ್ದಾರೆ.
ರೂಮಿ ಜಾಫೆರಿ
ಸುಶಾಂತ್ ಸಿಂಗ್ ರಜಪೂತ್ ಅವರ ಉತ್ತಮ ಸ್ನೇಹಿತನಾಗಿದ್ದ ರೂಮಿ, ರಿಯಾಳ ಜೊತೆ ರೊಮ್ಯಾಂಟಿಕ್ ನಾಟಕವೊಂದನ್ನು ನಿರ್ದೇಶಿಸಲು ಸಜ್ಜಾಗುತ್ತಿದ್ದರು. ಶೂಟಿಂಗ್ಗಾಗಿ ಲಂಡನ್‌ಗೆ ತೆರಳಲು ಎಲ್ಲಾ ಸಿದ್ಧತೆ ಮಾಡಿದ್ದರು. ಆದರೆ ಸುಶಾಂತ್ ನಿಧನದಿಂದ ಅದು ಸ್ಥಗಿತಗೊಂಡಿತ್ತು. ಅಷ್ಟೇ ಅಲ್ಲದೆ, ರಿಯಾ ಈ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು.
ಸುಶಾಂತ್ ಈ ಚಿತ್ರದಲ್ಲಿ ನಾಯಕನಾಗಿದ್ದರು. ಆದರೆ ಅವರ ಸಾವಿನ ಬಳಿಕ ಬೇರೊಬ್ಬ ನಟನನ್ನು ಆಯ್ಕೆ ಮಾಡುವುದಾಗಿ ರೂಮಿ ತಿಳಿಸಿದ್ದಾರೆ.