ಲೇಟ್ ಆಗಿ ಬಂದ್ರು ಲೆಟೆಸ್ಟ್ ಆಗಿ ಕೋಮರಂ ಭೀಮ್ನ ಎನ್ಟಿಆರ್ ಪಾತ್ರವನ್ನು ರಾಮ್ಚರಣ್ ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ರಾಮ್ಚರಣ್ ಮತ್ತು ಎನ್ಟಿಆರ್ ಕಥಾನಾಯಕರಿಗಾಗಿ ಎಸ್.ಎಸ್.ರಾಜಮೌಳಿ ನಿರ್ದೇಶಿಸುತ್ತಿರುವ ಭಾರೀ ಬಜೆಟ್ ಚಿತ್ರ ‘ಆರ್ಆರ್ಆರ್’. ಆಲಿಯಾಭಟ್, ಓಲಿವಿಯಾ ಮಾರಿಸ್ ಈ ಚಿತ್ರದ ಕಥಾ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಕನ್ನಡದಲ್ಲೇ ‘ಕೋಮರಂ ಭೀಮ್’ ಪರಿಚಯಿಸಿದ ರಾಮ್ಚರಣ್... ಆರ್ಆರ್ಆರ್ ಸೆಕೆಂಡ್ ಟೀಸರ್ ಔಟ್! - ಆರ್ಆರ್ಆರ್ ಚಿತ್ರ ಟೀಸರ್ ಸುದ್ದಿ
ಎನ್ಟಿಆರ್ ಅಭಿಮಾನಿಗಳು ಎಷ್ಟೋ ದಿನಗಳಿಂದ ಎದುರು ನೋಡ್ತಿದ್ದ ಆ ಸಮಯ ಬಂದೇ ಬಿಟ್ಟಿದೆ. ಆರ್ಆರ್ಆರ್ ಚಿತ್ರದ ಕಥಾ ನಾಯಕ ಎನ್ಟಿಆರ್ ಫಸ್ಟ್ ಲುಕ್ ಮತ್ತು ಟೀಸರ್ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಈ ಟೀಸರ್ಗೆ ಟಾಲಿವುಡ್ ನಟ ರಾಮ್ ಚರಣ್ ಕನ್ನಡಲ್ಲೇ ಧ್ವನಿ ನೀಡಿರುವುದು ವಿಶೇಷವಾಗಿದೆ.
ಕೃಪೆ: Youtube
ಕಳೆದ ನಾಲ್ಕೈದು ತಿಂಗಳ ಹಿಂದೆ ‘ಭೀಮ್ ಫಾರ್ ರಾಮರಾಜು’ ಅಂತಾ ಅಲ್ಲೂರಿ ಸೀತಾರಾಮರಾಜುವಿನ ರಾಮ್ಚರಣ್ ಪಾತ್ರವನ್ನು ಚಿತ್ರತಂಡ ಪರಿಚಯಿಸಿತ್ತು. ಈಗ ‘ಕೋಮರಂ ಭೀಮ್’ ಪಾತ್ರವನ್ನು ಅಭಿನಯಿಸುತ್ತಿರುವ ಎನ್ಟಿಆರ್ಅನ್ನು ಚಿತ್ರತಂಡ ಪ್ರೇಕ್ಷಕರಿಗೆ ಪರಿಚಯಿಸಿದೆ.
ರಾಜಮೌಳಿ ಚಿತ್ರತಂಡ ಎನ್ಟಿಆರ್ ಅಭಿನಯದ ಟೀಸರ್ಅನ್ನು ಇಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದ್ರೆ ಅಭಿಮಾನಿಗಳಿಗೆ ಅರ್ಧ ಗಂಟೆ ತಡವಾಗಿ ಟೀಸರ್ಅನ್ನು 11.30ಕ್ಕೆ ಬಿಡುಗಡೆ ಮಾಡಿದೆ.
Last Updated : Oct 22, 2020, 12:35 PM IST