ಕರ್ನಾಟಕ

karnataka

ETV Bharat / sitara

ಇರ್ಫಾನ್ ಖಾನ್ ಜನ್ಮದಿನ.. ಹಳೆಯ ವಿಡಿಯೋದ ಮೂಲಕ ತಂದೆ ನೆನೆದ ಪುತ್ರ - ಇರ್ಫಾನ್ ಖಾನ್ ಪುತ್ರ ಬಾಬಿಲ್ ಖಾನ್ ಇನ್ಸ್ಟಾಗ್ರಾಮ್

ದಿವಂಗತ ಇರ್ಫಾನ್ ಖಾನ್ ಅವರ 54ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಹಳೆಯ ವಿಡಿಯೋವೊಂದನ್ನು ಪೋಸ್ಟ್ ಮಾಡುವ ಮೂಲಕ ಅವರ ಪುತ್ರ ಬಾಬಿಲ್, ತಂದೆಯನ್ನು ನೆನಪಿಸಿಕೊಂಡಿದ್ದಾರೆ.

irfan khan
irfan khan

By

Published : Jan 7, 2021, 12:52 PM IST

ನವದೆಹಲಿ: ಇರ್ಫಾನ್ ಖಾನ್ ವಿಡಿಯೋ ಕಾಲ್ ಮಾಡಲು ಪ್ರಯಾಸಪಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರ ಪುತ್ರ ಬಾಬಿಲ್ ಖಾನ್ ತಮ್ಮ ತಂದೆಯ 54ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಂಡಿದ್ದಾರೆ.

ಇರ್ಫಾನ್, ಅವರ ಪತ್ನಿ ಸುತಪಾ ಮತ್ತು ಅವರ ಕಿರಿಯ ಮಗ ಅಯಾನ್ ಅವರು ಬಾಬಿಲ್​ಗೆ ವಿಡಿಯೋ ಕಾಲ್ ಮಾಡಲು ಪ್ರಯತ್ನಿಸುತ್ತಿರುವ ಹಳೆಯ ಫ್ಯಾಮಿಲಿ ವಿಡಿಯೋವನ್ನು ಅವರು ಇನ್​​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬದ ಆಚರಣೆಗಳಲ್ಲಿ ತಂದೆ ಭಾಗಿಯಾಗುತ್ತಿರಲಿಲ್ಲ ಎಂಬುದನ್ನು ನೆನಪಿಸಿಕೊಂಡಿರುವ ಬಾಬಿಲ್ ತಂದೆಯ ಜನ್ಮದಿನದಂದು ಭಾವನಾತ್ಮಕ ಶೀರ್ಷಿಕೆ ಬರೆದಿದ್ದಾರೆ.

ABOUT THE AUTHOR

...view details