ಕರ್ನಾಟಕ

karnataka

ETV Bharat / sitara

ಸುಶಾಂತ್​​ ಸಿಂಗ್​ ಬಳಿ ಇರುವ ಎರಡು ವಸ್ತುಗಳನ್ನು ಬಹಿರಂಗಪಡಿಸಿದ ಗೆಳತಿ ರಿಯಾ - sushant singh rajput case

ಸುಶಾಂತ್‌ನ ಏಕೈಕ ಆಸ್ತಿ ನಾನು ಹೊಂದಿದ್ದೇನೆ. ಇದು ಲಿಲ್ಲು ಶೋಯಿಕ್ (ಅವಳ ಸಹೋದರ) ಕೈಬರಹ, ಬೆಬು ನಾನು, ಸರ್ ನನ್ನ ತಂದೆ, ಮಾಮ್ ನನ್ನ ತಾಯಿ, ಮಿಠಾಯಿ ಅವನ ನಾಯಿ ಎಂದು ಟಿಪ್ಪಣಿಯಲ್ಲಿರುವ ಹೆಸರುಗಳನ್ನು ಜಲೇಬಿ ಸ್ಟಾರ್ ರಿಯಾ ವಿವರಿಸಿದರು..

Rhea Chakraborty and Sushant
ಸುಶಾಂತ್​​ ಸಿಂಗ್​​​ ಮತ್ತು ರಿಯಾ ಚಕ್ರವರ್ತಿ

By

Published : Aug 8, 2020, 7:18 PM IST

ಮುಂಬೈ :ನಟ ಮತ್ತು ಗೆಳೆಯ ದಿ.ಸುಶಾಂತ್​​ ಸಿಂಗ್​​ ರಜಪೂತ್​​​ ಅವರ ಬಳಿಯಿರುವ ಎರಡು ವಸ್ತುಗಳನ್ನು ನಟಿ ರಿಯಾ ಚಕ್ರವರ್ತಿ ಅವರು ಬಹಿರಂಗಪಡಿಸಿದ್ದಾರೆ.

ದಿವಂಗತ ನಟನ ಸಿಪ್ಪರ್ ಬಾಟಲ್ ಇದ್ದು, ಆ ಬಾಟಲ್​​​​ ಮೇಲೆ ಸುಶಾಂತ್ ಅವರ 2019ರ ಹಿಟ್ ಸಿನಿಮಾದ ಚಿತ್ರ ಚಿಚೋರೆ ಶೀರ್ಷಿಕೆ ಇದೆ. ಇನ್ನೊಂದು ಕೃತಜ್ಞತಾ ಸಲ್ಲಿಸಿರುವ ಪಟ್ಟಿಯೊಂದು ಇದ್ದು, ರಿಯಾ ಅವರ ನೋಟ್​​​​ಬುಕ್​​​​ನಲ್ಲಿ ಸುಶಾಂತ್ ಅದನ್ನು ಬರೆದಿದ್ದಾರೆ.

ನಟನ ವಕೀಲ ಸತೀಶ್ ಮನೇಶಿಂದೆ ಅವರು ಇತ್ತೀಚೆಗೆ 'ಕೃತಜ್ಞತಾ ಪಟ್ಟಿಯ' ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಟ ತಮ್ಮ ಜೀವನ ಮತ್ತು ರಿಯಾ ಅವರ ಕುಟುಂಬದ ಉಪಸ್ಥಿತಿಗೆ ಕೃತಜ್ಞರಾಗಿರುವುದಾಗಿ ಉಲ್ಲೇಖಿಸಿದ್ದಾರೆ.

ಕೃತಜ್ಞತಾ ಪಟ್ಟಿ

ಸುಶಾಂತ್‌ನ ಏಕೈಕ ಆಸ್ತಿ ನಾನು ಹೊಂದಿದ್ದೇನೆ. ಇದು ಲಿಲ್ಲು ಶೋಯಿಕ್ (ಅವಳ ಸಹೋದರ) ಕೈಬರಹ, ಬೆಬು ನಾನು, ಸರ್ ನನ್ನ ತಂದೆ, ಮಾಮ್ ನನ್ನ ತಾಯಿ, ಮಿಠಾಯಿ ಅವನ ನಾಯಿ ಎಂದು ಟಿಪ್ಪಣಿಯಲ್ಲಿರುವ ಹೆಸರುಗಳನ್ನು ಜಲೇಬಿ ಸ್ಟಾರ್ ರಿಯಾ ವಿವರಿಸಿದರು.

ಸಿಪ್ಪರ್ ಬಾಟಲ್

ಸುಶಾಂತ್ ಸಾವಿನ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ರಿಯಾ, ಆಕೆಯ ಸಹೋದರ ಶೋಯಿಕ್, ಆಕೆಯ ಚಾರ್ಟರ್ಡ್ ಅಕೌಂಟೆಂಟ್ ರಿತೇಶ್ ಶಾ ಮತ್ತು ಮಾಜಿ ಮ್ಯಾನೇಜರ್ ಶ್ರುತಿ ಮೋದಿ ಅವರನ್ನು 8 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ ಪ್ರಶ್ನಿಸಿದೆ. ವಿಚಾರಣೆಯ ಒಂದು ದಿನದ ನಂತರ ಈ ಟಿಪ್ಪಣಿ ಬೆಳಕಿಗೆ ಬಂದಿದೆ.

ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ, ಇಂದ್ರಜಿತ್ ಚಕ್ರವರ್ತಿ, ಸಂಧ್ಯಾ ಚಕ್ರವರ್ತಿ, ಶೋಯಿಕ್ ಚಕ್ರವರ್ತಿ, ಸ್ಯಾಮ್ಯುಯೆಲ್ ಮಿರಾಂಡಾ, ಶ್ರುತಿ ಮೋದಿ ಮತ್ತು ಇತರ ಆರು ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್ಐಆರ್ ದಾಖಲಿಸಿದೆ. ನಟನ ತಂದೆ ಕೆ ಕೆ ಸಿಂಗ್ ಸಲ್ಲಿಸಿದ ಎಫ್‌ಐಆರ್‌ನಲ್ಲಿ ರಿಯಾ ವಿರುದ್ಧ​​​​ ಆತ್ಮಹತ್ಯೆ ಮತ್ತು ಮನಿ ಲಾಂಡ್‌ರಿಂಗ್ ಆರೋಪ ಹೊರಿಸಿದ್ದರು.

ABOUT THE AUTHOR

...view details