ಕರ್ನಾಟಕ

karnataka

ETV Bharat / sitara

ಸುಶಾಂತ್​ ಆತ್ಮಹತ್ಯೆ ಪ್ರಕರಣ: ಜಾರಿ ನಿರ್ದೇಶನಾಲಯದೆದುರು ರಿಯಾ ಹಾಜರು - ಜಾರಿ ನಿರ್ದೇಶನಾಲಯ

ಆಗಸ್ಟ್ 7 ರಂದು ಜಾರಿ ನಿರ್ದೇಶನಾಲಯದ ಕಚೇರಿಗೆ ಖುದ್ದು ಹಾಜರಾಗಬೇಕು ಎಂದು ಇಡಿ ಅಧಿಕಾರಿಗಳು ರಿಯಾ ಚಕ್ರವರ್ತಿಗೆ ಸಮನ್ಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

Rhea Chakraborty
Rhea Chakraborty

By

Published : Aug 7, 2020, 2:41 PM IST

Updated : Aug 7, 2020, 3:08 PM IST

ಮುಂಬೈ:ಉದಯೋನ್ಮುಖ ಬಾಲಿವುಡ್ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ರಿಯಾ ಚಕ್ರವರ್ತಿಗೆ ನೋಟಿಸ್​ ಜಾರಿಯಾಗಿದ್ದು, ಅದರ ಪ್ರಕಾರ ಇಂದು ಅವರು ವಿಚಾರಣೆಗೆ ಹಾಜರಾದರು.

ಸುಶಾಂತ್​ ಬ್ಯಾಂಕ್​ ಅಕೌಂಟ್​​ನಿಂದ ರಿಯಾ ಚಕ್ರವರ್ತಿ ಖಾತೆಗೆ 15 ಕೋಟಿ ರೂ ವರ್ಗಾವಣೆ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು.

ವಿಚಾರಣೆಗೆ ಹಾಜರಾಗಲು ಇನ್ನಷ್ಟು ಸಮಯ ನೀಡುವಂತೆ ರಿಯಾ ವಕೀಲರು ಮನವಿ ಮಾಡಿದ್ದರು. ಆದರೆ, ಇಡಿ ಮನವಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಇಂದು ಬೆಳಗ್ಗೆ 11:30ಕ್ಕೆ ರಿಯಾ ವಿಚಾರಣೆಗೆ ಹಾಜರಾದರು.

ಇದನ್ನೂ ಓದಿ:ಸುಶಾಂತ್​​ ಆತ್ಮಹತ್ಯೆ: ನಟಿ ರಿಯಾ ಚಕ್ರವರ್ತಿ ವಿರುದ್ಧ ಪ್ರಕರಣ ದಾಖಲಿಸಿದ ಸಿಬಿಐ

ಜೂನ್​ 14ರಂದು ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

Last Updated : Aug 7, 2020, 3:08 PM IST

ABOUT THE AUTHOR

...view details