ಕರ್ನಾಟಕ

karnataka

ETV Bharat / sitara

ಸಿಎಎ ಪ್ರತಿಭಟನೆಗಳಿಗೆ ಪಾಕ್‌ನಿಂದ ಹಣ.. ಬಿಜೆಪಿ ಸಂಸದ ರವಿ ಕಿಶನ್

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ, ಯಾರಿಗೂ ತಿಳಿಯದ ವಿಷಯವೆಂದರೆ ಪ್ರತಿಭಟನೆ ಮಾಡಲು ಪಾಕಿಸ್ತಾನ ಧನಸಹಾಯ ಮಾಡುತ್ತಿದೆ ಎಂದು ಬಿಜೆಪಿ ಸಂಸದ ರವಿ ಕಿಶನ್ ಆರೋಪಿಸಿದರು.

ಬಿಜೆಪಿ ಸಂಸದ ರವಿ ಕಿಶನ್
ಬಿಜೆಪಿ ಸಂಸದ ರವಿ ಕಿಶನ್

By

Published : Jan 21, 2020, 8:32 PM IST

ಪಾಟ್ನ: ಪಾಕಿಸ್ತಾನದಿಂದ ಹಣವನ್ನು ತಂದು ಇಲ್ಲಿನ ಜನರಿಗೆ ಹಂಚುವ ಮೂಲಕ ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಜನರಿಗೆ ತಪ್ಪು ಕಲ್ಪನೆ ಮೂಡಿಸಿ ಧರಣಿ ಮಾಡಿಸುತ್ತಿವೆ ಎಂದು ಬಿಜೆಪಿ ಸಂಸದ ರವಿ ಕಿಶನ್ ಆಪಾದಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಕಿಡಿಕಾರಿದ ಅವರು, ಪಾಕಿಸ್ತಾನದ ಹಣದಿಂದ ವಿರೋಧ ಪಕ್ಷಗಳು ಧರಣಿ ಕುಳಿತಿವೆ. ಅವರು ನೀಡುತ್ತಿರುವ ಧನಸಹಾಯದಿಂದ ವಿರೋಧ ಪಕ್ಷಗಳು ಎಗ್ಗಿಲ್ಲದೇ ಕುತಂತ್ರಗಳನ್ನ ಮಾಡುತ್ತಿವೆ. ಇದರಿಂದ ಏನೂ ಆಗುವುದಿಲ್ಲ ಎಂದರು.

ಕೇಜ್ರಿವಾಲ್ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ರವಿ ಕಿಶನ್ ಕಿಡಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಬ್ಬ ಕಪಟ ನಾಯಕ. ಜನರು ಕೇಜ್ರಿವಾಲ್ ಅವರ ಬೂಟಾಟಿಕೆ ಅರ್ಥಮಾಡಿಕೊಂಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಈ ಬಾರಿ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡಲಿದ್ದಾರೆ ಎಂದರು.

For All Latest Updates

ABOUT THE AUTHOR

...view details