ಹೈದರಾಬಾದ್:ಬಾಲಿವುಡ್ ನಟಿ ರವೀನಾ ಟಂಡನ್ ಅವರ ತಂದೆ, ನಿರ್ದೇಶಕ ರವಿ ಟಂಡನ್(86) ಇಂದು ಬೆಳಗ್ಗೆ ಮುಂಬೈನ ನಿವಾಸದಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು, ನಟ- ನಟಿಯರು ಸಂತಾಪ ಸೂಚಿಸಿದ್ದಾರೆ.
ನಟಿ ರವೀನಾ ಟಂಡನ್ ಅವರು ತಮ್ಮ ತಂದೆಯ ಜೊತೆ ಇರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ' ನೀವು ಎಂದಿಗೂ ನನ್ನ ಜೊತೆಗೇ ಇರುತ್ತೀರಿ, ನಾನು ನಿಮ್ಮೊಂದಿಗೆ ಇರುವೆ. ನಿಮ್ಮನ್ನು ನಾನು ಬಿಟ್ಟು ಕೊಡುವುದಿಲ್ಲ. ಲವ್ ಯೂ ಅಪ್ಪ' ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.