ಕರ್ನಾಟಕ

karnataka

By

Published : Mar 2, 2020, 3:00 PM IST

ETV Bharat / sitara

ಲಕ್ಷುರಿ ಕಾರ್​ ಬಿಟ್ಟು ಆಟೋ ಏರಿದ ಬಾಲಿವುಡ್​ ಬೆಡಗಿ, ಯಾಕೆ ಗೊತ್ತಾ?

ಬಾಲಿವುಡ್ ನಟ-​ ನಟಿಯರು, ಪ್ರಯಾಣಕ್ಕಾಗಿ ಯಾವತ್ತೂ ತಮ್ಮ ಲಕ್ಷುರಿ ಕಾರುಗಳನ್ನೇ ನೆಚ್ಚಿಕೊಂಡಿರುತ್ತಾರೆ. ಆದ್ರೆ ಸದ್ಯ ಕೆಜಿಎಫ್-2 ಚಿತ್ರದ ಮೂಲಕ ತೆರೆಯಲ್ಲಿ ಮಿಂಚಲು ಹೊರಟಿರೋ ಬಾಲಿವುಡ್​ ಬೆಡಗಿ ರವೀನಾ ಟಂಡನ್, ಆಟೋದಲ್ಲಿ ಪ್ರಯಾಣಿಸಿ ಶಾಕ್​ ಮೂಡಿಸಿದ್ದಾರೆ. ತಮ್ಮ ಆಟೋ ಪ್ರಯಾಣದ ವಿಡಿಯೋವನ್ನು ರವೀನಾ ಇನ್‌ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

Raveena Tandon
ರವೀನಾ ಟಂಡನ್

ಮುಂಬೈ:ಬಾಲಿವುಡ್ ನಟಿ ರವೀನಾ ಟಂಡನ್ ತನ್ನ ಸೋದರ ಸೊಸೆಯ ಮೆಹೆಂದಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಟೋ ರಿಕ್ಷಾ ಏರಿ ಹೋಗಿದ್ದಾರೆ.

ರವೀನಾ, ತನ್ನ ಮಗಳು ರಾಶಾ ಜೊತೆ ಆಟೋ ಸವಾರಿ ಮಾಡಿದ್ದಾರೆ. ಕೆಜಿಎಫ್- 2 ಚಿತ್ರದಲ್ಲಿ ರೀ ಎಂಟ್ರಿ ಕೊಡಲು ಸಜ್ಜಾಗಿರುವ ನಟಿ ರವೀನಾ, ತಮ್ಮ ಆಟೋ ಪ್ರಯಾಣದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

"ನನ್ನ ಸೊಸೆಯ ಮೆಹಂದಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾರಿಗಾಗಿ ಕಾಯುತ್ತಾ ತಡವಾಗಿತ್ತು. ಬಳಿಕ ನಾನು ಮತ್ತು ರಾಶಾ ಆಟೋ ಹತ್ತಿ ಪ್ರಯಾಣಿಸಿದೆವು. ಇದು ಸುಂದರವಾದ ಆಟೋ ಸವಾರಿ! ಮುಂಬೈ ಆಟೋ ಚಾಲಕರು ರಕ್ಷಕರು!" ಎಂದು ತಮ್ಮ ವೀಡಿಯೊಗೆ ಕ್ಯಾಪ್ಷನ್​ ನೀಡಿದ್ದಾರೆ.

ಇನ್ನೊಂದು ವಿಡಿಯೋ ಹಂಚಿಕೊಂಡಿರುವ ರವೀನಾ, ಅಲ್ಲಿ ಆಟೋ ಚಾಲಕ ರವೀನಾ ನಟಿಸಿದ ಎಲ್ಲ ಚಿತ್ರಗಳ ಬಗ್ಗೆ ನಟಿಯ ಬಳಿ ಹೇಳುತ್ತಿರುವುದನ್ನು ಕಾಣಬಹುದು.

ಕೆಜಿಎಫ್-2 ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವು 2018 ರ ಕನ್ನಡ ಬ್ಲಾಕ್​​ಬಸ್ಟರ್​​​ ಕೆಜಿಎಫ್-1 ರ ಫಾಲೋ - ಅಪ್ ಚಿತ್ರ.

ABOUT THE AUTHOR

...view details