ಶಂತನು ಬಾಗ್ಚಿ ನಿರ್ದೇಶನದ 1970 ರ-ಸೆಟ್, ಬೇಹುಗಾರಿಕೆ, ಥ್ರಿಲ್ಲರ್ ಚಿತ್ರ ' ಮಿಷನ್ ಮಜ್ನು' ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.
ರಶ್ಮಿಕಾ ಮಂದಣ್ಣ, ಸಿದ್ಧಾರ್ಥ್ ಮಲ್ಹೋತ್ರಾ ಮಿಷನ್ ಮಜ್ನು ಚಿತ್ರ 1970ರ ದಶಕದಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ ಎನ್ನಲಾಗಿದೆ. ಭಾರತೀಯ ಗೂಢಚಾರ ಸಂಸ್ಥೆ ರಾ(RAW) ತಂಡ ಪಾಕಿಸ್ತಾನದಲ್ಲಿ ನಡೆಸಿದ ಅತಿ ದೊಡ್ಡ ಆಪರೇಷನ್ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆಯಂತೆ. ಈ ಚಿತ್ರ ಪಾಕಿಸ್ತಾನದ ನೆಲದಲ್ಲಿ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ರಾ ಕಾರ್ಯಾಚರಣೆ(RAW operation)ಯ ಕಥೆ ಹೇಳಲಿದೆ.
ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಲ್ಹೋತ್ರಾ ಅವರು RAW ಏಜೆಂಟ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪಾಕಿಸ್ತಾನದ ಹೃದಯಭಾಗದಲ್ಲಿ ಭಾರತದ ಅತ್ಯಂತ ಧೈರ್ಯಶಾಲಿ ರಹಸ್ಯ ಕಾರ್ಯಾಚರಣೆಯನ್ನು ಮುನ್ನಡೆಸುತ್ತಾರೆ.
ಮಿಷನ್ ಮಜ್ನು ಕಥೆಯನ್ನು ಪರ್ವೀಝ್ ಶೇಖ್, ಅಸೀಂ ಅರೋರಾ, ಸುಮಿತ್ ಬತೇಜಾ ಬರೆದಿದ್ದಾರೆ. ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಾಯಕರಾಗಿದ್ದು, ಅವರಿಗೆ ರಶ್ಮಿಕಾ ಮಂದಣ್ಣ ನಾಯಕಿ. ಇದು ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಬಾಲಿವುಡ್ ಸಿನಿಮಾ ಆಗಿದೆ.
ಮಿಷನ್ ಮಜ್ನು ಸಿನಿಮಾದಲ್ಲಿ ಪರ್ಮೀತ್ ಸೇಥಿ, ಶಾರಿಬ್ ಹಷ್ಮಿ, ಜಾಕಿರ್ ಹುಸೇನ್, ಕುಮುದ್ ಮಿಶ್ರಾ, ಅರ್ಜನ್ ಬಾಜ್ವಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೋನಿ ಸ್ಕ್ರೂವಾಲಾ, ಅಮರ್ ಬುಟಾಲಾ ಮತ್ತು ಗರಿಮಾ ಮೆಹ್ತಾ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಪ್ರೊಡಕ್ಷನ್ ಹೌಸ್ RSVP ಮಿಷನ್ ಮಜ್ನು ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ಈ ಬಗ್ಗೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. ಮಿಷನ್ ಮಜ್ನು ಮೇ 13, 2022ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.