ದಕ್ಷಿಣ ಭಾರತ ಮಾತ್ರವಲ್ಲದೇ ಉತ್ತರ ಭಾರತದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ 28.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರು ಯಾವುದೇ ಫೋಟೋ, ವಿಡಿಯೋ ಹಂಚಿಕೊಂಡ್ರೂ ಸಿಕ್ಕಾಪಟ್ಟೆ ಲೈಕ್ಸ್, ಕಮೆಂಟ್ಸ್ ಬಂದೇ ಬರುತ್ತವೆ.
ಇದೀಗ ರಶ್ಮಿಕಾ, ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿರುವ ಲೆಹೆಂಗಾ ಧರಿಸಿ ಪೋಸ್ ನೀಡಿರುವ ಬ್ಯೂಟಿಫುಲ್ ಫೋಟೋವೊಂದನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ನೀಲಿ ಮತ್ತು ಗೋಲ್ಡನ್ ಕಲರ್ ಮಿಶ್ರಿತ ಡೀಪ್ ನೆಕ್ ಲೆಹೆಂಗಾಗೆ ದುಪ್ಪಟಾ ಜೊತೆಯಲ್ಲಿ ಜುಮ್ಕಾ ಧರಿಸಿರುವ 'ಪುಷ್ಪಾ'ದ ಶ್ರೀವಲ್ಲಿ 'ಹೀಗೆ ಪೋಸ್ ಕೊಡಲು ಯತ್ನಿಸುತ್ತಿರುವೆ' ಎಂದು ಲಾಫಿಂಗ್ ಎಮೋಜಿ ಜೊತೆ ಬರೆದುಕೊಂಡಿದ್ದಾರೆ.