ಮುಂಬೈ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಇನ್ನು ಮಾರ್ಚ್ 4 ರಿಂದ ಬಾಲಿವುಡ್ನ ತಮ್ಮ ಚೊಚ್ಚಲ ಚಿತ್ರ 'ಮಿಷನ್ ಮಜ್ನು' ಶೂಟಿಂಗ್ ಪ್ರಾರಂಭಿಸಲಿದ್ದಾರೆ. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಚಿತ್ರೀಕರಣ ಪ್ರಾರಂಭಿಸಲು ರಶ್ಮಿಕಾ ಲಖನೌಗೆ ಆಗಮಿಸಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇದು ಥ್ರಿಲ್ಲರ್ ಸಿನಿಮಾ ಆಗಿದ್ದು, ದಕ್ಷಿಣ ಭಾರತದ ತಾರೆ ಈ ಪ್ರಕಾರದಲ್ಲಿ ಕೆಲಸ ಮಾಡುವುದು ಇದೇ ಮೊದಲು. ತೆಲುಗು ಚಿತ್ರರಂಗದಲ್ಲಿ ಗೀತ ಗೋವಿಂದಂ ಮತ್ತು ಸರಿಲೇರು ನೀಕೆವರು ಹಿಟ್ ಸಿನಿಮಾದಲ್ಲಿ ನಟಿಸಿ ಜನಮೆಚ್ಚುಗೆ ಗಳಿಸಿದ ನಟಿ ರಶ್ಮಿಕಾ ಮಂದಣ್ಣ.