ಕರ್ನಾಟಕ

karnataka

ETV Bharat / sitara

ಬಾಲಿವುಡ್​​ ಚಿತ್ರರಂಗಕ್ಕೂ ಕಾಲಿಟ್ಟ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ..! - National crush Rashmika Mandanna

ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ದೊಡ್ಡ ಹೆಸರು ಮಾಡಿದ್ದ ರಶ್ಮಿಕಾ ಮಂದಣ್ಣ ಇದೀಗ ಮಿಷನ್ ಮಜ್ನು ಚಿತ್ರದ ಮೂಲಕ ಬಾಲಿವುಡ್​​​​ಗೆ ಕಾಲಿಟ್ಟಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಸಿದ್ದಾರ್ಥ್ ಮಲ್ಹೋತ್ರ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.

Rashmika mandanna
ರಶ್ಮಿಕಾ ಮಂದಣ್ಣ

By

Published : Dec 23, 2020, 12:58 PM IST

ಕರ್ನಾಟಕದ ಕ್ರಶ್ ಎಂದೇ ಖ್ಯಾತರಾಗಿದ್ದ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ನ್ಯಾಷನಲ್ ಕ್ರಷ್ ಆಗಿ ಗುರುತಿಸಿಕೊಂಡಿದ್ದರು. ಕನ್ನಡ ಚಿತ್ರರಂಗದ ಮೂಲಕ ಕರಿಯರ್ ಆರಂಭಿಸಿ ತೆಲುಗು, ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್​​​ಗೂ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಇಂಥ ಸಂದರ್ಭದಲ್ಲಿ ಸಿನಿಮಾ ರಿಲೀಸ್​ ಮಾಡಿದರೆ ಗತಿ ಏನು... ತರುಣ್​ ಸುಧೀರ್​

ಸ್ಟೂಡೆಂಟ್ ಆಫರ್ ದಿ ಇಯರ್ ಚಿತ್ರದ ಸಿದ್ದಾರ್ಥ್ ಮಲ್ಹೋತ್ರ ಜೊತೆ ರಶ್ಮಿಕಾ ಮಂದಣ್ಣ ಹಿಂದಿ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಮಿಷನ್ ಮಜ್ನು ಎಂದು ಹೆಸರಿಡಲಾಗಿದ್ದು ಚಿತ್ರದ ಪೋಸ್ಟರ್ ಕೂಡಾ ಬಿಡುಡೆಯಾಗಿದೆ. ಚಿತ್ರಕ್ಕೆ ಶಾಂತನೂ ಬಗಚಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. 70 ದಶಕದಲ್ಲಿ ನಡೆದ ನೈಜ‌ ಘಟನೆಗಳನ್ನಾಧಾರಿಸಿದ ಚಿತ್ರ ಇದಾಗಿದೆ. ಚಿತ್ರದಲ್ಲಿ ಸಿದ್ದಾರ್ಥ್ ಏಜೆಂಟ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಾವು ಬಾಲಿವುಡ್​​​ಗೆ ಕಾಲಿಟ್ಟ ಈ ​​​​​​​​​​ ಈ‌ ಸಿಹಿ ಸುದ್ದಿಯನ್ನು ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಬಾಲಿವುಡ್‌ ಹಿಂದಿ ಆಲ್ಬಮ್​​​ನಲ್ಲಿ ನಟಿಸಿರುವ ರಶ್ಮಿಕಾ, ಈಗ ಸಿನಿಮಾ ಮೂಲಕ ಕೂಡಾ ಹಿಂದಿ ಪ್ರೇಕ್ಷಕರನ್ನು ರಂಜಿಸಲು ಹೊರಟಿದ್ದಾರೆ. ತೆಲುಗು ಚಿತ್ರದಂತೆ ಬಾಲಿವುಡ್​​ ಚಿತ್ರದಲ್ಲಿ ರಶ್ಮಿಕಾ ಸ್ಟಾರ್​​​​ಡಮ್ ಪಡೆಯಲಿದ್ದಾರಾ ಎಂಬುದನ್ನು ಕಾದು ನೋಡಬೇಕು.

ಸಿದ್ದಾರ್ಥ್ ಮಲ್ಹೋತ್ರ

ABOUT THE AUTHOR

...view details