ಕರ್ನಾಟಕ

karnataka

ETV Bharat / sitara

ಅಮಿತಾಬ್​​ ಬಚ್ಚನ್​​​ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ! - ನಟಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ

25ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್​ ಸ್ಟಾರ್​ ಬಿಗ್​ ಬಿ ಜೊತೆ ಕೇಕ್​ ಕತ್ತರಿಸಿದ್ದಾರೆ.

Rashmika Mandanna
Rashmika Mandanna

By

Published : Apr 6, 2021, 11:05 PM IST

ಬಾಲಿವುಡ್​​ಗೆ ಎಂಟ್ರಿ ನೀಡಿರುವ ಕಿರಿಕ್​ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಬಿಗ್​ ಬಿ ಅಮಿತಾಬ್​​​ ಬಚ್ಚನ್ ಜೊತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇನ್​​ಸ್ಟಾಗ್ರಾಮ್​ನಲ್ಲಿ ಮಾಹಿತಿ ಕೂಡ ಶೇರ್​ ಮಾಡಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ರಶ್ಮಿಕಾ

ನಿನ್ನೆಯಷ್ಟೇ 25ನೇ ವರ್ಷಕ್ಕೆ ಕಾಲಿಟ್ಟಿದ್ದು, ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸದ್ಯ ಬಾಲಿವುಡ್​ ಬಿಗ್​ ಸ್ಟಾರ್​ ಅಮಿತಾಬ್​​ ಜೊತೆ ರಶ್ಮಿಕಾ ಮಂದಣ್ಣ ಗುಡ್​ ಬೈ ಸಿನಿಮಾದಲ್ಲಿ ನಟನೆ ಮಾಡ್ತಿದ್ದು, ಸಿನಿಮಾ ಸೆಟ್​​ನಲ್ಲೇ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ನಿರ್ದೇಶಕ ವಿಕಾಸ್ ಬಹಲ್ ಜೊತೆ ಫೋಟೋ

ಹುಟ್ಟುಹಬ್ಬ ಆಚರಿಸಿಕೊಂಡಿರುವ ರಶ್ಮಿಕಾ ನಿರ್ದೇಶಕ ವಿಕಾಸ್ ಬಹಲ್​ ಹಾಗೂ ಅಮಿತಾಬ್​​ ಬಚ್ಚನ್ ಜೊತೆ ಫೋಟೋಗೆ ಪೋಸ್​​ ನೀಡಿದ್ದಾರೆ. ಅಮಿತಾಬ್​​ ಬಚ್ಚನ್​​ ಅವರೊಂದಿಗೆ ಫೋಟೋ ತೆಗೆದುಕೊಳ್ಳುವ ಉದ್ದೇಶದಿಂದ ಮಾಸ್ಕ್​ ತೆಗೆದಿರುವುದಾಗಿ ಉಲ್ಲೇಖಿಸಿದ್ದಾರೆ.

ABOUT THE AUTHOR

...view details