ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ ತಮ್ಮ ಮುಂಬರುವ ಸಿನಿಮಾ ‘ಗುಡ್ ಬೈ’ ಚಿತ್ರೀಕರಣ ಸೆಟ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಇತರ ಸಹನಟರ ಜೊತೆ ವಿಶೇಷವಾಗಿ ಫಾದರ್ಸ್ ಡೇ ಆಚರಿಸಿದ್ದಾರೆ. ಈ ವೇಳೆ ರಶ್ಮಿಕಾ ಉಡುಗೊರೆಯಾಗಿ ಕೇಕ್ ಮತ್ತು ಪುಷ್ಪಗುಚ್ಛವನ್ನು ನೀಡಿದರು.
ಅಮಿತಾಬ್ ಬಚ್ಚನ್ ಅವರಿಗೆ ರಶ್ಮಿಕಾ ಮಂದಣ್ಣ ಉಡುಗೊರೆ ಈ ಸಂದರ್ಭದಲ್ಲಿ ಮಾತನಾಡಿದ ಬಚ್ಚನ್, ಸಹನಟರಾದ ಪಾವೈಲ್ ಗುಲಾಟಿ, ರಶ್ಮಿಕಾ ಮಂದಣ್ಣ ಮತ್ತು ಎಲಿ ಅವ್ರಾಮ್ ಅವರು ತಮಗೆ ತಂದೆಯ ಸ್ಥಾನ ನೀಡಿ ಗೌರವಿಸುತ್ತಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
‘ಗುಡ್ ಬೈ’ ಸಿನಿಮಾ ಸೆಟ್‌ನಲ್ಲಿ ತಾರೆಯರು ತಮ್ಮ ಬ್ಲಾಗ್ನಲ್ಲಿ ಈ ಕುರಿತಾಗಿ ಬರೆದುಕೊಂಡಿರುವ ಅಮಿತಾಬ್ ಬಚ್ಚನ್, ಚಲನಚಿತ್ರ ಪಾತ್ರವರ್ಗ ಒಂದು ಕುಟುಂಬವಿದ್ದಂತೆ. ನಾನು ತಂದೆಯ ವ್ಯಕ್ತಿಯಂತೆ ಅವರಿಗೆ ಕಾಣುತ್ತಿದ್ದೇನೆ ಅನ್ನೋದನ್ನು ನೀವು ಗಮನಿಸಿರಬಹುದು. ಆದ್ದರಿಂದ ಅವರೆಲ್ಲ ನನ್ನೊಂದಿಗೆ ಈ ವಿಶೇಷ ದಿನ ಆಚರಿಸಿದ್ದಾರೆ" ಎಂದಿದ್ದಾರೆ.
ಗುಡ್ ಬೈ ಸಿನಿಮಾದಲ್ಲಿ ರಶ್ಮಿಕಾ ಅಮಿತಾಬ್ ಮಗಳಾಗಿ ನಟಿಸುತ್ತಿದ್ದಾರಂತೆ. ಚಿತ್ರಕ್ಕೆ ವಿಕಾಸ್ ಬಾಹ್ಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.