ಮುಂಬೈ: ನಟಿ ತಾಪ್ಸಿ ಪನ್ನು ಅಭಿನಯದ ರಶ್ಮಿ ರಾಕೆಟ್ ಚಿತ್ರ ಅಕ್ಟೋಬರ್ 15 ರಂದು ಜೀ 5ನಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ಬಗ್ಗೆ ಮಾತನಾಡಿರುವ ತಾಪ್ಸಿ, ಈ ಚಿತ್ರವು ಪಿತೃಪ್ರಧಾನ ಕಲ್ಪನೆಯನ್ನು ಪ್ರಶ್ನಿಸುವುದಾಗಿದೆ ಎಂದರು.
ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ಬಯಕೆ ಹೊಂದಿರುವ ಸಣ್ಣ ಪಟ್ಟಣದ ಕ್ರೀಡಾಪಟುವಿನ ಪಾತ್ರವನ್ನು ಈ ಚಿತ್ರದಲ್ಲಿ ತಾಪ್ಸಿ ನಿರ್ವಹಿಸಿದ್ದಾರೆ. ರಶ್ಮಿ ರಾಕೆಟ್ ನಲ್ಲಿ ಪ್ರಿಯಾಂಶು ಪೈನ್ಯುಲಿ, ಅಭಿಷೇಕ್ ಬ್ಯಾನರ್ಜಿ, ಶ್ವೇತಾ ತ್ರಿಪಾಠಿ ಮತ್ತು ಸುಪ್ರಿಯಾ ಪಾಠಕ್ ಕೂಡ ಅಭಿನಯಿಸಿದ್ದಾರೆ.
ಈ ಪಾತ್ರವನ್ನು ನಿರ್ವಹಿಸಲು ನಟಿ ಕಠಿಣ ದೈಹಿಕ ತರಬೇತಿ ಪಡೆದಿದ್ದಾರೆ, ಆಕರ್ಷ್ ಖುರಾನಾ ನಿರ್ದೇಶನ ಮತ್ತು ಆರ್‌ಎಸ್‌ವಿಪಿ ನಿರ್ಮಿಸಿದ ಈ ಚಿತ್ರದ ಚಿತ್ರೀಕರಣ ಕಳೆದ ವರ್ಷ ನವೆಂಬರ್‌ನಲ್ಲಿ ಆರಂಭವಾಗಿ ಜನವರಿ 2021 ರಲ್ಲಿ ಮುಕ್ತಾಯವಾಗಿತ್ತು.
ಚಿತ್ರದ ಟ್ರೈಲರ್ನಲ್ಲಿ, ಮಹಿಳಾ ಕ್ರೀಡಾಪಟುಗಳ ಮೇಲೆ ನಡೆಸಲಾಗುವ ಲಿಂಗ ಪರೀಕ್ಷೆಗೆ ರಶ್ಮಿ (ತಾಪ್ಸಿ) ಒಳಗಾಗುತ್ತಾರೆ. ಅವರು ಆ ಸಮಯದಲ್ಲಿ ಏನೆಲ್ಲ ಕಷ್ಟ ಅನುಭವಿಸುತ್ತಾರೆ ಅನ್ನೋದ್ರ ಸುತ್ತ ಚಿತ್ರ ಹೆಣೆಯಲಾಗಿದೆ.
ತಾಪ್ಸಿ ಅಭಿನಯಕ್ಕೆ ಕಮೆಂಟ್ಗಳ ಸುರಿಮಳೆ
ಇತ್ತೀಚೆಗೆ ತಾಪ್ಸಿ ಪನ್ನು ದೇಹ ಗಂಡಸರ ರೀತಿ ಇದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅದನ್ನು ತಾಪ್ಸಿ ತುಂಬಾ ಪಾಸಿಟಿವ್ ಆಗಿ ಸ್ವೀಕರಿಸಿರುವುದು ವಿಶೇಷ. ನೀವು ಕಮೆಂಟ್ ಮಾಡಿದ ಈ ಸಾಲನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಮುಂಚಿತವಾಗಿ ನಿಮಗೆ ಧನ್ಯವಾದಗಳು. ಇಂಥ ಮಾತುಗಳನ್ನು ಕೇಳಲು ನಾನು ತುಂಬ ಶ್ರಮಪಟ್ಟಿದ್ದೇನೆ’ ಎಂದು ತಾಪ್ಸಿ ಟ್ವೀಟ್ ಮಾಡಿದ್ದರು.
ಯಾರು ಹೆಣ್ಣು, ಯಾರು ಗಂಡು ಅನ್ನೋದನ್ನ ಯಾರು ಹೇಳ್ತಾರೆ? ನಿಮ್ಮ ಸ್ನಾಯುಗಳ ರಚನೆಯಲ್ಲಿ ನೀವು ಒಬ್ಬ ಮಹಿಳೆ, ನೀವು ಒಬ್ಬ ಪುರುಷ ಎಂದು ನಿರ್ಣಯಿಸುವುದಕ್ಕೆ ಸಾಧ್ಯವೇ? ಕೆಲವು ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನವಿರುತ್ತೆ. ಅಂಥವರು ಏನು ಮಾಡಬೇಕು ಎಂದು ತಾಪ್ಸಿ ಪ್ರಶ್ನಿಸಿದ್ದಾರೆ.
ಚಿತ್ರಕ್ಕಾಗಿ ನಾನು ದೇಹ ದಂಡಿಸಿದೆ, ನೀವು ಕೊಟ್ಟ ಕಮೆಂಟ್ಗಳನ್ನೂ ಪಾಸಿಟಿವ್ ಆಗಿ ತೆಗೆದುಕೊಂಡೆ. ಆದರೆ, ಹಾರ್ಮೋನುಗಳ ಅಸಮತೋಲನ ಸಮಸ್ಯೆ ಅನುಭವಿಸುತ್ತಿರುವ ಹೆಣ್ಣುಮಕ್ಕಳು ಈ ಮಾತನ್ನು ಕೇಳಿದರೆ ಏನಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆನ್ನು ತೋರಿಸಿದ್ದಕ್ಕೆ ತರಹೇವಾರಿ ಕಮೆಂಟ್ಸ್.. ಟ್ರೋಲ್ಗೆ ತಕ್ಕ ಉತ್ತರ ನೀಡಿದ ನಟಿ ತಾಪ್ಸಿ ಪನ್ನು
ಈ ಚಿತ್ರಕ್ಕೆ ನಂದ ಪೆರಿಯಸಾಮಿ, ಅನಿರುದ್ಧ ಗುಹಾ ಮತ್ತು ಕನಿಕಾ ಧಿಲ್ಲೋನ್ ಕಥೆ - ಚಿತ್ರಕಥೆ ಬರೆದಿದ್ದಾರೆ.