ಮುಂಬೈ :ನಟ ರಣವೀರ್ ಸಿಂಗ್ ಮತ್ತು ನಿರ್ಮಾಪಕ ಕಮ್ ನಿರ್ದೇಶಕ ರೋಹಿತ್ ಶೆಟ್ಟಿ ಮುಂಬರುವ ಹಾಸ್ಯವನ್ನೇ ಪ್ರಧಾನವಾಗಿರಿಸಿಕೊಂಡಿರುವ ಚಿತ್ರಕ್ಕಾಗಿ ಪರಸ್ಪರ ಕೈಜೋಡಿಸಲು ಮಾತುಕತೆ ನಡೆಸಿದ್ದಾರೆ. ಈ ಸಿನಿಮಾದಲ್ಲಿ ರೋಹಿತ್ ತಮ್ಮ ಗೋಲ್ಮಾಲ್ ಪ್ರಾಂಚೈಸ್ ಚಿತ್ರಗಳಿಗಿಂತ ದೊಡ್ಡ ಬಜೆಟ್‌ನ ಹೂಡಿಕೆ ಮಾಡಲು ಆಸಕ್ತರಾಗಿದ್ದಾರೆ.
ಚಿತ್ರರಂಗದಲ್ಲಿ ರೋಹಿತ್ ಮತ್ತು ರಣವೀರ್ ಪರಸ್ಪರ ಉತ್ತಮ ಸಂಬಂಧ ಹೊಂದಿದ್ದಾರೆ. ಈ ಹಿಂದೆ ತಾವಿಬ್ಬರೂ ಇನ್ನಷ್ಟು ದಿನಗಳ ಕಾಲ ಒಟ್ಟಿಗೆ ಕೆಲಸ ಮಾಡಲು ಬಯಸಿದ್ದೇವೆಂದು ಹೇಳಿಕೊಂಡಿದ್ದಾರೆ. ಅಲ್ಲದೇ, 2018ರಲ್ಲಿ ತೆರೆಕಂಡ ಸಿಂಬಾ ಸಿನಿಮಾದಲ್ಲಿ ಪೊಲೀಸ್ ಇಲಾಖೆ ಅಕ್ರಮವನ್ನು ಬಯಲಿಗೆಳೆದು ಪ್ರೇಕ್ಷಕರಿಂದ ಉತ್ತಮ ಪ್ರಶಂಸೆಗೆ ಭಾಜನರಾಗಿದ್ದರು.