ಬಾಲಿವುಡ್ ನ ಜನಪ್ರಿಯ ತಾರಾ ದಂಪತಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸಾಮಾಜಿಕ ಮಾಧ್ಯಮದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಗುರುವಾರ ದೀಪಿಕಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಗೆಹ್ರೈಯಾನ್ ಟ್ರೈಲರ್ ಬಿಡುಗಡೆಯಾಗಿದೆ.
ದೀಪಿಕಾ ಅವರ ಸಿನಿಮಾದ ಕೆಲವೊಂದು ಪೋಸ್ಟರ್ ಈ ಹಿಂದೆ ವೈರಲ್ ಆಗಿದ್ದವು. ರೊಮ್ಯಾಂಟಿಕ್ ಲಿಪ್‌ಲಾಕ್ ಫೋಟೋಗಳು ನೆಟ್ಟಿಗರ ಮನಸು ಗೆದ್ದಿದ್ದಲ್ಲದೇ, ಈ ಸಿನಿಮಾ ಕುರಿತಾಗಿದ್ದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತ್ತು. ಇದೀಗ ಎಲ್ಲರು ಕಾಯುತ್ತಿದ್ದ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಇದಕ್ಕೆ ರಣವೀರ್ ಸಿಂಗ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ