ಹೈದರಾಬಾದ್ (ತೆಲಂಗಾಣ):ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಸ್ಪೇನ್‌ನಲ್ಲಿ ತಮ್ಮ ಮುಂಬರುವ ಚಿತ್ರ ಪಠಾಣ್ನ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. ಪಠಾಣ್ ಚಿತ್ರ ತಂಡವು ಚಿತ್ರೀಕರಣದ ಪ್ರಗತಿಯ ಬಗ್ಗೆ ಮೌನವಹಿಸಿದ್ದರೆ, ದೀಪಿಕಾ ಅವರ ಪತಿ ರಣ್ವೀರ್ ಸಿಂಗ್ ಮಾತ್ರ ಬಹು ನಿರೀಕ್ಷಿತ ಚಿತ್ರದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಸದ್ಯ ಪಠಾಣ್ ಚಿತ್ರದ ಚಿತ್ರೀಕರಣ ಸ್ಪೇನ್‌ನಲ್ಲಿ ನಡೆಯುತ್ತಿದ್ದು, ಮುಂದಿನ ವರ್ಷ ಜನವರಿ 25ರಂದು ಚಿತ್ರ ಬಿಡುಗಡೆಯಾಗಲಿದೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದು, ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಇನ್ನೂ ಹಿಂದಿ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ಹೇಳಲಾಗಿದೆ. ಈ ಚಿತ್ರದ ಬಗ್ಗೆ ಚಿತ್ರತಂಡದಿಂದ ಅಷ್ಟಾಗಿ ಮಾಹಿತಿ ಹೊರ ಬೀಳದಿದ್ದರೂ, ದೀಪಿಕಾ ಅವರ ಪತಿ ರಣ್ವೀರ್ ಸಿಂಗ್ ಅಭಿಮಾನಿಗಳೊಂದಿಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.