ಮುಂಬೈ: ನಟ ರಣವೀರ್ ಸಿಂಗ್ ಅವರ ಹಿಟ್ ಚಿತ್ರ 'ದಿಲ್ ಧಡಕ್ನೇ ದೋ' ಬಿಡುಗಡೆಯಾಗಿ ಇಂದಿಗೆ ಐದು ವರ್ಷಗಳನ್ನು ಪೂರ್ಣಗೊಳಿಸಿದೆ. ಈ ವಿಶೇಷ ಸಂದರ್ಭದಲ್ಲಿ, ನಟ ರಣವೀರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ.
'ದಿಲ್ ಧಡಕ್ನೇ ದೋ' ಬಿಡುಗಡೆಯಾಗಿ 5 ವರ್ಷ: ಥ್ರೋಬ್ಯಾಕ್ ಚಿತ್ರ ಹಂಚಿಕೊಂಡ ನಟ ರಣವೀರ್ ಸಿಂಗ್ - ಥ್ರೋಬ್ಯಾಕ್ ಚಿತ್ರ ಹಂಚಿಕೊಂಡ ನಟ ರಣವೀರ್ ಸಿಂಗ್
ಚಿತ್ರ 'ದಿಲ್ ಧಡಕ್ನೇ ದೋ' ಬಿಡುಗಡೆಯಾಗಿ ಇಂದಿಗೆ ಐದು ವರ್ಷಗಳನ್ನು ಪೂರ್ಣಗೊಳಿಸಿದೆ. 'ದಿಲ್ ಧಡಕ್ನೇ ದೋ' ಚಿತ್ರದಲ್ಲಿ ಅನಿಲ್ ಕಪೂರ್, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ, ಫರ್ಹಾನ್ ಅಖ್ತರ್ ಮತ್ತು ಶೆಫಾಲಿ ಷಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೋಯಾ ಅಖ್ತರ್ ನಿರ್ದೇಶಿಸಿದ ಈ ಚಿತ್ರವು ಕುಟುಂಬದ ಜೀವನವನ್ನು ಬದಲಾಯಿಸುವ ಅನುಭವಗಳನ್ನ ಆಧರಿಸಿದೆ.
ರಣವೀರ್ ಅವರ ಈ ಪೋಸ್ಟ್ ಬಗ್ಗೆ ಚಿತ್ರದ ನಿರ್ದೇಶಕ ಜೋಯಾ ಅಖ್ತರ್ ಸಹ ಕಮೆಂಟ್ ಮಾಡಿದ್ದಾರೆ. 'ದಿಲ್ ಧಡಕ್ನೇ ದೋ' ಚಿತ್ರದಲ್ಲಿ ಅನಿಲ್ ಕಪೂರ್, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ, ಫರ್ಹಾನ್ ಅಖ್ತರ್ ಮತ್ತು ಶೆಫಾಲಿ ಷಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೋಯಾ ಅಖ್ತರ್ ನಿರ್ದೇಶಿಸಿದ ಈ ಚಿತ್ರವು ಕುಟುಂಬದ ಜೀವನವನ್ನು ಬದಲಾಯಿಸುವ ಅನುಭವಗಳನ್ನು ಆಧರಿಸಿದೆ.
ನಟ ರಣವೀರ್ ಶೀಘ್ರದಲ್ಲೇ '83' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 1983 ರಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ ವಿಜಯದ ಈ ಕಥೆ ಶೀಘ್ರದಲ್ಲೇ ದೊಡ್ಡ ಪರದೆ ಮೇಲೆ ಬರಲಿದೆ. ಇದರಲ್ಲಿ ರಣವೀರ್, ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅಲ್ಲದೇ, ಚಿತ್ರದಲ್ಲಿ ನಟಿ ದೀಪಿಕಾ‘, ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.