ಕರ್ನಾಟಕ

karnataka

ETV Bharat / sitara

ಪತ್ನಿ ಮಾಡಿದ ಹೊಸ ಹೇರ್​​ಸ್ಟೈಲ್ ಫೋಟೋ ಹಂಚಿಕೊಂಡ ರಣ್ವೀರ್ ಸಿಂಗ್​​​​​​​​​​​​​​​​​ - ಪತಿಗೆ ಹೇರ್​ಸ್ಟೈಲ್ ಮಾಡಿದ ದೀಪಿಕಾ

ಬಾಲಿವುಡ್ ತಾರಾ ದಂಪತಿಗಳಾದ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಲಾಕ್​​ಡೌನ್​​ ದಿನಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ದೀಪಿಕಾ ತನ್ನ ಪತಿಗೆ ಹೊಸ ಹೇರ್​ಸ್ಟೈಲ್​ ಮಾಡಿದ್ದು ರಣ್ವೀರ್​ ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Deepika Padukone
ದೀಪಿಕಾ ಪಡುಕೋಣೆ

By

Published : Jul 21, 2020, 2:30 PM IST

ಲಾಕ್​ ಡೌನ್​ ಸಮಯದಲ್ಲಿ ಸೆಲಬ್ರಿಟಿ ಹಿರೋಯಿನ್​​​ಗಳು ತಮ್ಮ ಪತಿ ದೇವರಿಗೆ ಹೇರ್​ ಕಟ್ ಮಾಡುತ್ತಿರುವ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಈಗ ಬಾಲಿವುಡ್ ನಟ ರಣ್ವೀರ್ ಸಿಂಗ್​​ಗೆ ಪತ್ನಿ ದೀಪಿಕಾ ಪಡುಕೋಣೆ ಹೇರ್​​ಸ್ಟೈಲ್ ಮಾಡಿರುವ ಫೋಟೋವನ್ನು ರಣ್ವೀರ್ ತಮ್ಮ ಇನ್ಸ್​ಟಾಗ್ರಾಮ್​​ನಲ್ಲಿ ವೈರಲ್ ಆಗಿದೆ.

ಪೋಟೋವನ್ನು ತಮ್ಮ ಇನ್ಸ್​​ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ರಣ್ವೀರ್​, ಹೇರ್​​ಸ್ಟೈಲ್ ಬೈ ದೀಪಿಕಾ ಪಡುಕೋಣೆ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಹೇರ್​ಸ್ಟೈಲ್ ಜಪಾನಿ ನಟ ತೊಷಿರೋ ಮಿಫುನಿ 1961 ರಲ್ಲಿ ಬಿಡುಗಡೆಯಾದ ಯೊಜಿಂಬೊ ಚಿತ್ರದ ಹೇರ್​​ಸ್ಟೈಲ್​​​ನಂತೆ ಕಾಣುತ್ತದೆ. ಈ ಕೇಶವಿನ್ಯಾಸ ನನಗೆ ಬಹಳ ಇಷ್ಟವಾಯ್ತು..ನಿಮಗೆ ಏನು ಅನ್ನಿಸ್ತಿದೆ...? ಎಂದು ರಣ್ವೀರ್ ತಮ್ಮ ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ.

ದೀಪಿಕಾ ಪಡುಕೋಣೆ

ಈ ಪೋಟೋ ಪೋಸ್ಟ್ ಮಾಡಿ ಒಂದು ಗಂಟೆ ಅವಧಿಯಲ್ಲೇ ಅಭಿಮಾನಿಗಳು 1.3 ಮಿಲಿಯನ್ ಲೈಕ್ಸ್ ಒತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಮಿಜಾನ್ ಜಫ್ರಿ, ಜಿಮ್ ಸರ್ಬ್ , ಮಾನ್ವಿ ಘಾಗ್ರೊ ನಂತ ಸೆಲಬ್ರಿಟಿಗಳು ಕೂಡಾ ರಣ್ವೀರ್ ಫೋಟೋಗೆ ಕಮೆಂಟ್ ಮಾಡಿದ್ದಾರೆ. ಲಾಕ್​ ಡೌನ್​​ನಿಂದ ಶೂಟಿಂಗ್ ಇರದೆ ಮನೆಯಲ್ಲೇ ಇರುವ ರಣ್ವೀರ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಇದ್ದು ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ABOUT THE AUTHOR

...view details