ಬಾಲಿವುಡ್ ಸ್ಮಾರ್ಟ್ಗಾಯ್ ರಣ್ವೀರ್ ಸಿಂಗ್ ಫ್ಯಾಶನ್ ಪ್ರಿಯ. ಅಭಿನಯದ ಜತೆಗೆ ಇವರ ಡ್ರೆಸ್ ಸೆನ್ಸ್ ಕೂಡ ಮೆಚ್ಚಿಕೊಂಡಿದ್ದಾರೆ ಬಾಲಿವುಡ್ ಮಂದಿ.
ಗಲ್ಲಿ ಬಾಯ್ ನ್ಯೂ ಲುಕ್... ಹದ್ದು ಮೀರಿ ಟ್ರೋಲ್ ಮಾಡಿದ ನೆಟ್ಟಿಜನ್ಸ್ - undefined
ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ನ್ಯೂ ಲುಕ್ ಟ್ರೋಲ್ಗೆ ತುತ್ತಾಗಿದೆ. ನೆಟ್ಟಿಗರು ಎಲ್ಲೆ ಮೀರಿ ಗಲ್ಲಿಬಾಯ್ನ ನ್ಯೂ ಲುಕ್ಗೆ ಗೇಲಿ ಮಾಡಿದ್ದಾರೆ.
ವಿವಿಧ ಬಗೆಯ ಉಡುಪು ತೊಡುವ ರಣ್ವೀರ್ ಎಲ್ಲರ ಕಣ್ಣು ಕುಕ್ಕುತ್ತಾರೆ. ಬೇಕಾದ್ರೆ ಇವರ ಇನ್ಸ್ಟಾಗ್ರಾಂ ಒಮ್ಮೆ ಇಣುಕಿ ನೋಡಿ. ಕೆಲವರು ಆ್ಯಕ್ಟಿಂಗ್ಗೆ ಮಾರು ಹೋದರೆ ಮತ್ತೆ ಹಲವರು ಗಲ್ಲಿ ಬಾಯ್ನ ಬಟ್ಟೆಗೆ ಫಿದಾ ಆಗಿದ್ದಾರೆ. ಆದರೆ, ಇದೀಗ ರಣ್ವೀರ್ ನ್ಯೂ ಲುಕ್ ನೆಟ್ಟಿಗರಿಂದ ಟ್ರೋಲ್ ಆಗಿದೆ.
ಪದ್ಮಾವತ್ ನಟ ರಣ್ವೀರ್ ನೀಲಿ ಹಾಗೂ ಕೆಂಪು ಬಣ್ಣದ ಟ್ರ್ಯಾಕ್ ಸೂಟ್ ಧರಿಸಿ ಹೊಸ ಗೆಟೆಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ನ್ನು ತಮ್ಮ ಇನ್ಸ್ಟಾಗ್ರಾಂ ಹಾಗೂ ಟ್ವಿಟ್ಟರ್ನಲ್ಲಿ ಫುಲ್ ಜೋಶ್ನಲ್ಲಿ ಹಂಚಿಕೊಂಡಿದ್ದಾರೆ ಸ್ಮೈಲ್ ರಾಜಾ. ಆದರೆ, ಈ ನ್ಯೂ ಲುಕ್ ನೋಡುಗರ ಕಣ್ಣಿಗೆ ಚಂದ ಕಂಡಿಲ್ಲ. ಒಬ್ಬ ಸ್ಟಾರ್ ನಟ ಅಂತಾ ನೋಡದೆ ಸ್ವಲ್ಪ ಅತೀ ಎನ್ನುವಂತೆ ಟ್ರೋಲ್ ಮಾಡಿದ್ದಾರೆ. ರಣ್ವೀರ್ ಅವರ ಈ ಹೊಸ ಅವತಾರವನ್ನು ಟಾಯ್ಲೆಟ್ ಕ್ಲೀನರ್ ಬಾಟಲ್ಗೆ ಹೋಲಿಸಿ ಗೇಲಿ ಮಾಡಲಾಗಿದೆ.