ಮುಂಬೈ :ಬಾಲಿವುಡ್ ದಂಪತಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೊತೆಯಾಗಿ ನಟಿಸಿರುವ 1983ರ ವಿಶ್ವಕಪ್ ಕಥೆ ಆಧಾರಿತ '83 ಟ್ರೆಲರ್' ನಿನ್ನೆ ರಿಲೀಸ್ ಆಗಿದೆ.
ಈ ಚಿತ್ರದಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಡಿಫರೆಂಟ್ ಲುಕ್ನಲ್ಲಿ ಕಾಣಿಸಿದ್ದಾರೆ. ರೋಚಕ ಕಥೆಯೊಂದಿಗೆ ಚಿತ್ರ ನಿರ್ಮಾಣಗೊಂಡಿದೆ ಎಂಬುದು ಟ್ರೇಲರ್ ನೋಡುವುದರಿಂದಲೇ ಗೊತ್ತಾಗುತ್ತದೆ.
ಹಿಂದಿ, ಕನ್ನಡ, ತೆಲಗು ಸೇರಿದಂತೆ ಐದು ಭಾಷೆಗಳಲ್ಲಿ '83' trailer ರಿಲೀಸ್ ಆಗಿದೆ. ಕೇವಲ 24 ಗಂಟೆಯಲ್ಲಿ ದಾಖಲೆಯ 50 ಮಿಲಿಯನ್ ವೀಕ್ಷಣೆಗೊಳಗಾಗಿದೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಗಾಗಿರುವ ಮೊದಲ ಹಿಂದಿ ಚಿತ್ರ ಎಂಬ ದಾಖಲೆಗೆ ಪಾತ್ರವಾಗಿದೆ. ಇದರ ಬೆನ್ನಲ್ಲೇ ನಟ ರಣವೀರ್ ಸಿಂಗ್ ಸಿನಿಮಾ ರಸಿಕರಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾರೆ.
1983ರಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಭಾರತಕ್ಕೆ ಮೊಟ್ಟ ಮೊದಲ ವಿಶ್ವಕಪ್ ತಂದುಕೊಟ್ಟಿತ್ತು. ಈ ಕಥೆ ಆಧರಿಸಿ ಸಿನಿಮಾ ನಿರ್ಮಾಣಗೊಂಡಿದೆ. ಡಿಸೆಂಬರ್ 24ರಂದು ದೇಶಾದ್ಯಂತ ರಿಲೀಸ್ ಆಗಲಿದೆ.
3 ನಿಮಿಷ 50 ಸೆಕೆಂಡ್‌ನ ಈ ಟ್ರೇಲರ್ ರಿಲೀಸ್ ಆದ ಕೆಲ ನಿಮಿಷಗಳಲ್ಲೇ ಯುಟ್ಯೂಬ್ ಟ್ರೆಂಡಿಂಗ್ ಲಿಸ್ಟ್ ಸೇರಿದೆ. ಹಿಂದಿ, ತಮಿಳು, ತೆಲಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಸಿನಿಮಾ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡುವ ಸಾಧ್ಯತೆ ಇದೆ.
ಟೀಂ ಇಂಡಿಯಾ ಕ್ಯಾಪ್ಟನ್ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿದರೆ, ಅವರ ಪತ್ನಿಯಾಗಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ನಡೆದ ರೋಚಕ ಫೈನಲ್ ಪಂದ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಚಿತ್ರಕ್ಕೆ ಕಬೀರ್ ಖಾನ್ ನಿರ್ದೇಶನವಿದೆ. ಚಿತ್ರದಲ್ಲಿ ತಾಹಿರ್ ರಾಜ್ ಭಾಸಿನ್, ಸಾಕಿಬ್ ಸಲೀಮ್, ಆಮಿ ವಿರ್ಕ್, ಹಾರ್ಡಿ ಸಂಧು, ಪಂಕಜ್ ತ್ರಿಪಾಠಿ ಮತ್ತು ಸಾಹಿಲ್ ಖಟ್ಟರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.