ಬಾಲಿವುಡ್ ಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನಿನ್ನೆ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ನಿನ್ನೆ ತಿರುಪತಿಗೆ ತೆರಳಿ ಶ್ರೀನಿವಾಸನ ದರ್ಶನ ಕೂಡಾ ಪಡೆದಿದ್ದಾರೆ. ನಂತರ ಈ ಜೋಡಿ ಅಮೃತ್ ಸರದ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದೆ.
ಅಮೃತ್ ಸರದ 'ಗೋಲ್ಡನ್ ಟೆಂಪಲ್'ಗೆ ಭೇಟಿ ನೀಡಿದ ದೀಪ್‌ವೀರ್ ಜೋಡಿ - ದೀಪಿಕಾ ರಣವೀರ್ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ
ಕಳೆದ ವರ್ಷ ಇಟಲಿಯಲ್ಲಿ ಈ ಜೋಡಿ ಸಪ್ತಪದಿ ತುಳಿದಿತ್ತು. ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದೇ ಹೇಳಿಕೊಂಡು ತಿರುಗುತ್ತಿತ್ತು. ಆದರೆ ಕೊನೆಗೂ 14 ನವೆಂಬರ್ 2018 ರಂದು ದೀಪ್‌ವೀರ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.
ದೇವಸ್ಥಾನದ ಹೊರಗೆ ತೆಗೆದ ಪೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಜೋಡಿ, ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ದೇವರ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇವೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ಕಳೆದ ವರ್ಷ ಇಟಲಿಯಲ್ಲಿ ಈ ಜೋಡಿ ಸಪ್ತಪದಿ ತುಳಿದಿತ್ತು. ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದೇ ಹೇಳಿಕೊಂಡು ತಿರುಗುತ್ತಿತ್ತು. ಆದರೆ ಕೊನೆಗೂ 14 ನವೆಂಬರ್ 2018 ರಂದು ದೀಪ್‌ವೀರ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇಬ್ಬರ ವಿವಾಹ ವಾರ್ಷಿಕೋತ್ಸವಕ್ಕೆ ಕೋಟ್ಯಂತರ ಅಭಿಮಾನಿಗಳು ಶುಭ ಕೋರಿದ್ದಾರೆ.
ಮೇಘನಾ ಗುಲ್ಜರ್ ನಿರ್ದೇಶನದ 'ಚಪ್ಪಕ್' ಸಿನಿಮಾದಲ್ಲಿ ದೀಪಿಕಾ ಬ್ಯುಸಿ ಇದ್ದಾರೆ. ಆ್ಯಸಿಡ್ ದಾಳಿಗೆ ಒಳಗಾದ ಹೆಣ್ಣು ಮಗಳ ಪಾತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಲಕ್ಷ್ಮಿ ಅಗರ್ವಾಲ್ ಎಂಬ ಯುವತಿಯ ಜೀವನದಲ್ಲಿ ನಡೆದ ಕಥೆ ಇದು. ಇದರೊಂದಿಗೆ ಭಾರತದ ಮೊದಲ ಕ್ರಿಕೆಟ್ ವರ್ಲ್ಡ್ ಕಪ್ಗೆ ಸಂಬಂಧಿಸಿದ ಚಿತ್ರದಲ್ಲಿ ಕಪಿಲ್ ದೇವ್ ಪತ್ನಿ ರೋಮಿ ಪಾತ್ರದಲ್ಲಿ ದೀಪಿಕಾ ನಟಿಸಲಿದ್ದಾರೆ. ಚಿತ್ರದಲ್ಲಿ ರಣ್ವೀರ್ ಕಪಿಲ್ ದೇವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.