ಕರ್ನಾಟಕ

karnataka

ETV Bharat / sitara

ರಾನುಗೆ ಮನೆ ಸಿಗದಿದ್ದರೇನಂತೆ... ಎರಡನೇ ಬಾರಿ ಹಾಡಲುಚಾನ್ಸ್​ ಕೊಟ್ಟ ಹಿಮೇಶ್​ - ತೇರಿ ಮೇರಿ ಕಹಾನಿ

ಹಿಮೇಶ್ ರೇಶ್ಮಿಯಾ ಅವರ ಹ್ಯಾಪಿ ಹಾರ್ಡಿ ಮತ್ತು ಹೀರ್ ಚಿತ್ರಕ್ಕೆ ರಾನು ಮಂಡಲ್ ಹಾಡಿರುವ ತೇರಿ ಮೇರಿ ಕಹಾನಿ ಗೀತೆ ಫುಲ್ ಫೇಮಸ್ ಆಗಿದೆ. ಇದರ ಬೆನ್ನಲ್ಲೆ ಮತ್ತೊಂದು ಹಾಡಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಹಿಮೇಶ್​.

Ranu Mondal

By

Published : Aug 31, 2019, 11:58 AM IST

ಕೋಲ್ಕತ್ತಾ ರೈಲ್ವೆ ನಿಲ್ದಾಣದಲ್ಲಿ ಹಾಡು ಹೇಳುತ್ತಿದ್ದ ಗಾನ ಕೋಗಿಲೆ ರಾನು ಕಂಠಕ್ಕೆ ಈಗ ಬಂಗಾರದ ಬೆಲೆ ಬಂದಿದೆ. ಬಾಲಿವುಡ್ ಗಾಯಕ, ಸಂಗೀತ ನಿರ್ದೇಶಕ ಹಿಮೇಶ್​ ರೇಷ್ಮಿಯಾ ತಮ್ಮ ಚಿತ್ರದಲ್ಲಿ ಹಾಡಲು ಅವಕಾಶ ನೀಡಿದ್ದರು. ಈ ಹಾಡಿನ ಸಣ್ಣ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಹವಾ ಕ್ರಿಯೇಟ್ ಮಾಡಿತು. ಈ ಹಾಡಿಗೆ ಸಿಕ್ಕ ರೆಸ್ಪಾನ್ಸ್ ನೋಡಿರುವ ಹಿಮೇಶ್​, ತಮ್ಮ ಚಿತ್ರದ ಮತ್ತೊಂದು ಹಾಡನ್ನು ರಾನು ಮಂಡಲ್ ಅವರಿಂದ ಹಾಡಿಸಿದ್ದಾರೆ. ಈ ಹಾಡಿನ ರೆಕಾರ್ಡ್​ ನಿನ್ನೆ ಮುಗಿದಿದೆ.

ಇನ್ನು, ರಾನು ಅವರಿಗೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಕೂಡ ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ.

ABOUT THE AUTHOR

...view details