ಮುಂಬೈ: ಬಾಲಿವುಡ್ ಸ್ಟಾರ್ ದಂಪತಿಯಾದ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರ ಎರಡನೇ ಮಗನ ಹೆಸರು ಬಹಿರಂಗವಾಗಿದೆ. ಸೈಫ್ ದಂಪತಿ 2ನೇ ಮಗನಿಗೆ ಜೆಹ್ ಎಂದು ಹೆಸರಿಟ್ಟಿದ್ದಾರೆ ಎಂದು ಬಾಲಿವುಡ್ ಹಿರಿಯ ನಟ ನಟ ರಣಧೀರ್ ಕಪೂರ್ ಖಚಿತಪಡಿಸಿದ್ದಾರೆ.
ಫೆಬ್ರವರಿ 21ರಂದು ಸೈಫ್ ಮತ್ತು ಕರೀನಾ ದಂಪತಿಗೆ ಎರಡನೇ ಮಗುವಾಗಿದ್ದು, ಸುಮಾರು ಒಂದು ವಾರದ ಹಿಂದೆ ಜೆಹ್ ಎಂಬ ಹೆಸರನ್ನು ಅಂತಿಮಗೊಳಿಸಲಾಗಿತ್ತು ಎಂದು ನಟ ರಣಧೀರ್ ಕಪೂರ್ ಹೇಳಿದ್ದಾರೆ. ಲ್ಯಾಟಿನ್ ಭಾಷೆಯಲ್ಲಿ ಜೆಹ್ ಎಂದರೆ ನೀಲಿ ಗರಿಗಳ ಹಕ್ಕಿ ಎಂಬ ಅರ್ಥವಿದ್ದು, ಪಾರ್ಸಿ ಭಾಷೆಯಲ್ಲೂ ಇದಕ್ಕೆ ಅದೃಷ್ಟ ಎಂಬ ಅರ್ಥ ಬರುವ ಎಂದು ವರದಿಗಳು ಹೇಳಿವೆ.