ನವದೆಹಲಿ: ನಟ ರಣಬೀರ್ ಕಪೂರ್ ವಾಯ್ಸ್‌ಓವರ್‌ನೊಂದಿಗೆ ಟೀಸರ್ ಬಿಡುಗಡೆ ಮೂಲಕ ಕುತೂಹಲವನ್ನು ಕೆರಳಿಸಿರುವ 'ಅನಿಮಲ್' ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟಗೊಂಡಿದೆ.
ರಣಬೀರ್ ಮಾತ್ರವಲ್ಲದೆ ಈ ಚಿತ್ರದಲ್ಲಿ ಅನಿಲ್ ಕಪೂರ್, ಪರಿಣಿತಿ ಚೋಪ್ರಾ, ಮತ್ತು ಬಾಬಿ ಡಿಯೋಲ್ ಮುಖ್ಯ ಪಾತ್ರಗಳಲ್ಲಿದ್ದಾರೆ.

ಸಿನೆಮಾ 2022ರ ದಸರಾ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂದು ನಟ ಅನಿಲ್ ಕಪೂರ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಅವರು ಚಿತ್ರ ಟೀಸರ್ ಕೂಡಾ ಹಂಚಿಕೊಂಡಿದ್ದಾರೆ.
'ಕಬೀರ್ ಸಿಂಗ್' ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನೇತೃತ್ವದಲ್ಲಿ ಈ ಚಿತ್ರವನ್ನು ಭೂಷಣ್ ಕುಮಾರ್, ಪ್ರಣಯ್ ರೆಡ್ಡಿ ವಂಗಾ, ಮುರಾದ್ ಖೇತಾನಿ ಮತ್ತು ಕ್ರಿಶನ್ ಕುಮಾರ್ ನಿರ್ಮಿಸುತ್ತಿದ್ದಾರೆ.