ಹೈದರಾಬಾದ್ :ಮುಂಬೈನ ಬಾಂದ್ರಾದಲ್ಲಿ ನಿರ್ಮಾಣ ಹಂತದಲ್ಲಿದ್ದಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಅವರ ಮನೆಗೆ ತೌಕ್ತೆ ಚಂಡಮಾರುತದಿಂದ ಭಾರಿ ಹಾನಿ ಉಂಟಾಗಿದೆ.
ಮನೆ ನಿರ್ಮಾಣ ಸ್ಥಳದ ಮಧ್ಯದಲ್ಲೇ ಬೃಹತ್ ಗಾತ್ರದ ಮರ ಬಿದ್ದಿದ್ದರಿಂದ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಈ ಹಿಂದೆ, ರಣಬೀರ್ ಮತ್ತು ಆಲಿಯಾ ಈ ಮನೆ ಬಳಿ ಆಗಮಿಸಿದಾಗ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು.