ಹೈದರಾಬಾದ್: ಹೆಸರಾಂತ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಸಹೋದರ ಪಿ.ಸೋಮಶೇಖರ್ ಕೊರೊನಾದಿಂದಾಗಿ ಹೈದರಾಬಾದ್‌ನಲ್ಲಿ ಸಾವನ್ನಪ್ಪಿದ್ದಾರೆ.
ಪಿ. ಸೋಮಶೇಖರ್ ಅನೇಕ ಚಿತ್ರಗಳಿಗೆ ಕೆಲಸ ಮಾಡಿದ್ದರು. ರಂಗೀಲಾ, ದೌಡ್, ಸತ್ಯ, ಜಂಗಲ್ ಮತ್ತು ಕಂಪನಿ ಚಿತ್ರಗಳ ನಿರ್ಮಾಣದ ಜವಾಬ್ದಾರಿಯನ್ನು ಅವರು ವಹಿಸಿದ್ದರು. ಹಿಂದಿ ಚಿತ್ರ 'ಮುಸ್ಕುರಾಕೇ ದೇಖ್ ಜರಾ' ಚಿತ್ರವನ್ನೂ ನಿರ್ದೇಶಿಸಿದ್ದಾರೆ.
ಅವರು ಇತರೆ ವ್ಯವಹಾರಗಳಿಗೆ ಹೋಗುವುದರಿಂದ ನನ್ನಿಂದ ದೂರವಿದ್ದರು. ನನ್ನ ಜೀವನದ ಪ್ರಮುಖ ವ್ಯಕ್ತಿಗಳಲ್ಲಿ ಸೋಮಶೇಖರ್ ಒಬ್ಬರು ಎಂದು ವರ್ಮಾ ಹೇಳಿದ್ದಾರೆ.
ಸತ್ಯ ಚಿತ್ರೀಕರಣದ ಸಮಯದಲ್ಲಿ ಆರ್‌ಜಿವಿಗಿಂತಲೂ ಶೇಖರ್ ಅವರನ್ನು ನೋಡುತ್ತಿದ್ರೆ ಹೆಚ್ಚಾಗಿ ಭಯಪಡುತ್ತಿದ್ದೆ ಎಂದು ಪ್ರಮುಖ ನಾಯಕ ಜೇಡಿ ಚಕ್ರವರ್ತಿ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ಸೋಮಶೇಖರ್ ಸಾವಿನ ಬಗ್ಗೆ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಆತನಿಗೆ ತಾಯಿಯ ಮೇಲೆ ಎಲ್ಲಿಲ್ಲದ ಪ್ರೀತಿ ಇತ್ತು. ಕೊರೊನಾ ಸೋಂಕಿಗೆ ಒಳಗಾದ ನಂತರವೂ ತಾಯಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದ್ರೆ ಅವರಿಗೆ ತನ್ನ ಜೀವವನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.