ಹೈದರಾಬಾದ್:ರೋನಿ ಸ್ಕ್ರೂವಾಲಾ ನಿರ್ಮಾಣದ ಮುಂಬರುವ ಚಿತ್ರದಲ್ಲಿ ನಟಿಸಲು ಬಾಲಿವುಡ್ ತಾರೆ ರಕುಲ್ ಪ್ರೀತ್ ಸಿಂಗ್ ಒಪ್ಪಿಗೆ ಸೂಚಿಸಿದ್ದು, ಇದರಲ್ಲಿ ಅವರು ಕಾಂಡೋಮ್ ಪರೀಕ್ಷಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಈಗ ಶೀರ್ಷಿಕೆ ಸಿಕ್ಕಿದೆ.
ಕಾಂಡೋಮ್ ಟೆಸ್ಟರ್ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್.. ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್
ರಕುಲ್ ಪ್ರೀತ್ ಸಿಂಗ್ ಸಾಮಾಜಿಕ - ಹಾಸ್ಯ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರದಲ್ಲಿ ಅವರು ಕಾಂಡೋಮ್ ಪರೀಕ್ಷಕರಾಗಿ ಕಾಣಿಸಿಕೊಳ್ಳಲಿದ್ದಾರೆ.
Rakul's upcoming film wherein she plays condom tester gets title
ಚಿತ್ರಕ್ಕೆ 'ಛತ್ರಿವಾಲಿ' ಎಂಬ ಶೀರ್ಷಿಕೆ ಇಡಲಾಗಿದೆ. ವರದಿಗಳ ಪ್ರಕಾರ, ತೇಜಸ್ ವಿಜಯ್ ಡಿಯೋಸ್ಕರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ದಿಟ್ಟ ವಿಷಯದ ಕುರಿತು ಹಾಸ್ಯದೊಂದಿಗೆ ಸಂದೇಶ ನೀಡಲು ಚಿತ್ರ ತಯಾರಕರು ಯೋಜಿಸಿದ್ದಾರೆ. ಚಿತ್ರಕ್ಕೆ ರಕುಲ್ ಸಹಿ ಹಾಕಿದ್ದು, ಚಿತ್ರವನ್ನು ಈ ಹಿಂದೆ ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆಗೆ ನೀಡಲಾಗಿತ್ತಾದರೂ, ಇಬ್ಬರೂ ಈ ಪಾತ್ರವನ್ನು ನಿರಾಕರಿಸಿದ್ದರು.