ಮುಂಬೈ: ಬಾಲಿವುಡ್ ನಟ ರಾಜ್‌ಕುಮಾರ್ ರಾವ್ (Bollywood actor Rajkummar Rao) ಮತ್ತು ನಟಿ ಪತ್ರಲೇಖಾ (Actress Patralekha) ಡೇಟಿಂಗ್ನಲ್ಲಿದ್ದಾರೆ. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ. ಈ ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲಿದೆ ಎನ್ನಲಾಗುತ್ತಿತ್ತು. ಇದೀಗ ಈ ವದಂತಿಗೆ ಬ್ರೇಕ್ ಬಿದ್ದಿದೆ.
ಹೌದು, ಬಹುಕಾಲದ ಗೆಳತಿ ಪತ್ರಲೇಖಾ (Patralekha) ಅವರೊಂದಿಗೆ ನಟ ರಾಜ್‌ಕುಮಾರ್ ರಾವ್ (Rajkummar Rao) ಅವರು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅದರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ (Social networking site) ಹರಿದಾಡುತ್ತಿವೆ.
ನಿಶ್ಚಿತಾರ್ಥ ಮಾಡಿಕೊಂಡ ರಾಜ್‌ಕುಮಾರ್ ರಾವ್-ಪತ್ರಲೇಖಾ ಇನ್ನು ಕೆಲವು ಆಪ್ತರ ಸಮಕ್ಷಮದಲ್ಲಿ ಇತ್ತೀಚೆಗೆ ಚಂಡೀಗಢದಲ್ಲಿ ವಿವಾಹಪೂರ್ವ (pre-wedding celebration) ಸಂಭ್ರಮಾಚರಣೆಯಲ್ಲಿ ಮುಳುಗಿದ್ದ ಈ ಜೋಡಿ, ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ಕಳೆದ 10 ವರ್ಷಗಳಿಂದ ಪರಸ್ಪರ ಡೇಟಿಂಗ್ (Dating)ನಲ್ಲಿದ್ದರು.
ಹಾಗಾಗಿ ಬಾಲಿವುಡ್ನ ಮಗದೊಂದು ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ಇದೀಗ ಈ ಎಲ್ಲ ವದಂತಿಗಳಿಗೆ ಬ್ರೇಕ್ ಬಿದ್ದಿದೆ.
ಇದನ್ನೂ ಓದಿ:60 years singer; ಸಂಗೀತ ಕ್ಷೇತ್ರದಲ್ಲಿ 60 ವರ್ಷ ಪೂರೈಸಿದ ಗಾಯಕ ಕೆ.ಜೆ.ಯೇಸುದಾಸ್; ಸೆಲೆಬ್ರಿಟಿಗಳ tribute