ಚೆನ್ನೈ (ತಮಿಳುನಾಡು): ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರು ತಮ್ಮ ಮುಂದಿನ ಚಿತ್ರ 'ಓಹ್ ಸಾತಿ ಚಲ್' ಮೂಲಕ ಬಾಲಿವುಡ್‌ಗೆ ನಿರ್ದೇಶಕಿಯಾಗಿ ಪದಾರ್ಪಣೆ ಮಾಡುವುದಾಗಿ ಸೋಮವಾರ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಂದಿಯಲ್ಲಿ ನನ್ನ ಮೊದಲ ನಿರ್ದೇಶನವನ್ನು ನಿಮಗೆ ತಿಳಿಸಲು ಸಂತೋಷವಾಗುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆಗಳು ನನಗೆ ಬೇಕು ಎಂದಿದ್ದಾರೆ.
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಟನೆಯ 'ಝುಂಡ್' ಸಿನಿಮಾ ನಿರ್ಮಿಸಿದ್ದ ಮೀನೂ ಅರೋರಾ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
ಕಳೆದ ವಾರವಷ್ಟೇ ಐಶ್ವರ್ಯಾ ನಿರ್ದೇಶನ ಮಾಡಿದ 'ಪಯಣಿ..' ಮ್ಯೂಸಿಕ್ ವಿಡಿಯೋ ಬಿಡುಗಡೆಯಾಗಿದೆ. ಅನಿರುದ್ಧ್ ಹಾಡಿರುವ ಈ ಹಾಡಿಗೆ ಅಂಕಿತ್ ತಿವಾರಿ ಅವರ ಸಂಗೀತ ಮತ್ತು ವಿವೇಕ ಅವರ ಸಾಹಿತ್ಯವಿದೆ. 9 ವರ್ಷಗಳ ಸುದೀರ್ಘ ಅಂತರದ ಬಳಿಕ ಐಶ್ವರ್ಯಾ ನಿರ್ದೇಶನಕ್ಕೆ ಮರಳಿದ್ದಾರೆ.
ಇದನ್ನೂ ಓದಿ:'ಧನುಷ್-ಐಶ್ವರ್ಯಾ ನಡುವೆ ವಿಚ್ಛೇದನವಾಗಿಲ್ಲ.. ಇದು ಕುಟುಂಬ ಕಲಹವಷ್ಟೇ': ಕಸ್ತೂರಿರಾಜ ಸ್ಪಷ್ಟನೆ