ಮುಂಬೈ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ತಡೆಗಟ್ಟುವ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರವರೆಗೆ ಲಾಕ್‌ಡೌನ್ ವಿಸ್ತರಿಸಿರೋದನ್ನು ಸೂಪರ್ ಸ್ಟಾರ್ ನಟ ರಜನಿ ಕಾಂತ್ ಸೇರಿದಂತೆ ಸೆಲೆಬ್ರಿಟಿಗಳು ಸ್ವಾಗತಿಸಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಹೋರಾಡಲು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಪರ್ ಸ್ಟಾರ್ ರಜನಿ ಕಾಂತ್ ಅಭಿಮಾನಿಗಳನ್ನು ಕೋರಿಕೊಂಡಿದ್ದಾರೆ.
"ನಾವು 3 ವಾರಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ವೈರಸ್ ಹರಡುವುದನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಿದ್ದೇವೆ. ಮುಂದಿನ 3 ವಾರಗಳನ್ನು ಕಟ್ಟುನಿಟ್ಟಾದ ಲಾಕ್‌ಡೌನ್ ನಿಯಮ ಪಾಲಿಸಬೇಕೆಂದು ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೀಡಿದ ಆಜ್ಞೆ ಅನುಸರಿಸೋಣ. ನಮ್ಮದೇ ಕಲ್ಯಾಣಕ್ಕೆ ಇರುವ ಲಾಭದ ನಿಯಮಗಳನ್ನು ಮುರಿಯಬಾರದು" ಎಂದು ನಟಿ ಹೇಮಾ ಮಾಲಿನಿ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿ ಟ್ವೀಟ್ ಮಾಡಿದ್ದಾರೆ.
ಚಿತ್ರಕಥೆಗಾರ ಮತ್ತು ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಶಿ ಅವರು ಲಾಕ್‌ಡೌನ್ ವಿಸ್ತರಣೆಯನ್ನು ಸ್ವಾಗತಿಸಿದರು. 'ಮೋದಿ ಅವರ ಮಂಗಳ ಸಂದೇಶ ಇಂತಹ ಸಮಯದಲ್ಲಿ ಸದೃಢವಾಗಿ ಮತ್ತು ಒಗ್ಗಟ್ಟಿನಿಂದ ಇರಬೇಕಿದೆ. ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತವು ನಿರ್ಣಾಯಕ, ಆತ್ಮ ನಂಬಿಕೆ ಮತ್ತು ಕಲ್ಯಾಣಕ್ಕೆ ಉದಾಹರಣೆಯಾಗಿದೆ. ಎಲ್ಲರ ಹಿತದೃಷ್ಟಿಯಿಂದ ನಾವು ಜವಾಬ್ದಾರರಾಗಿರುತ್ತೇವೆ. ಯಾವುದೇ ನಕಾರಾತ್ಮಕತೆಯಿಂದ ವಿಚಲಿತರಾಗಬಾರದು' ಎಂದು ಟ್ವೀಟ್ ಮಾಡಿದ್ದಾರೆ.
ನಟ ಅರ್ಜುನ್ ಕಪೂರ್ ತಮ್ಮ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಲಾಕ್‌ಡೌನ್ ಅವಧಿ ವಿಸ್ತರಣೆ ಸ್ವಾಗತಿಸಿದ್ದಾರೆ. ನಟ ಮತ್ತು ನಿರ್ಮಾಪಕ ನೀಲ್ ನಿತಿನ್ ಮುಖೇಶ್ ಇನ್ಸ್ಟಾಗ್ರಾಮ್ನಲ್ಲಿ "ಮೇ 3 ರವರೆಗೆ ವಿಸ್ತರಣೆಯ ಬಗ್ಗೆ ನನ್ನ ಪ್ರತಿಕ್ರಿಯೆ. ಎಲ್ಲ ಭವಿಷ್ಯದ ಯೋಜನೆಗಳು. ಸಿದ್ಧವಾಗಿದೆಯೇ ಎಂದು ಪ್ರಶ್ನಿಸಿ ಬರೆದುಕೊಂಡಿದ್ದಾರೆ.