ಕರ್ನಾಟಕ

karnataka

ETV Bharat / sitara

ಕುಂದ್ರಾ ಮಾಡಿದ್ದು ಪ್ರಚೋದಕ ಚಿತ್ರಗಳು,ಅಶ್ಲೀಲ ಸಿನಿಮಾಗಳಲ್ಲ: ಪತಿಯ ಮುಗ್ಧತೆ ಬಗ್ಗೆ ಪತ್ನಿಯ ಹೇಳಿಕೆ - ನಟಿ ಶಿಲ್ಪಾ ಶೆಟ್ಟಿ ಪತಿಯ ಪ್ರಕರಣ

ಉದ್ಯಮಿ ರಾಜ್​ ಕುಂದ್ರಾ ಮುಗ್ಧ. ಅವರ ಹೆಸರನ್ನು ಪ್ರಕರಣದಲ್ಲಿ ವಿನಾ ಕಾರಣ ಸೇರಿಸಲಾಗಿದೆ. ಇದೊಂದು ಪಿತೂರಿ. ಲಂಡನ್ ಮೂಲದ ಅವರ ಸಂಬಂಧಿ ಪ್ರದೀಪ್​ ಭಕ್ಷಿ ಇದರ ನಿರ್ಮಾಣದಾತ. ಇನ್ನು ಇದರಲ್ಲಿ ಯಾವ ರೀತಿಯ ಕಂಟೆಂಟ್​ ಇರುತ್ತದೆ ಎಂಬುವುದು ಕೂಡ ನನಗೆ ತಿಳಿದಿಲ್ಲ ಎಂದು ನಟಿ ಶಿಲ್ಪಾ ಶೆಟ್ಟಿ ಪೊಲೀಸರ ಮುಂದೆ ತಮ್ಮ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

Raj Kundra pornography case
ಅಶ್ಲೀಲ ಸಿನಿಮಾಗಳ ನಿರ್ಮಾಣ ಪ್ರಕರಣ

By

Published : Jul 24, 2021, 6:07 PM IST

Updated : Jul 25, 2021, 12:33 PM IST

ಹೈದ್ರಾಬಾದ್​:ಅಶ್ಲೀಲ ಸಿನಿಮಾಗಳ ನಿರ್ಮಾಣ ಮಾಡುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಮುಂಬೈ ಕ್ರೈಂ ಬ್ರ್ಯಾಂಚ್​ ​ ಪೊಲೀಸರು ಉದ್ಯಮಿ ರಾಜ್​ ಕುಂದ್ರಾ ಅವರ ವಿಚಾರಣೆಯನ್ನು ಮುಂದುವರೆಸಿದ್ದಾರೆ. ಪ್ರಕರಣದ ಹೆಚ್ಚಿನ ಮಾಹಿತಿಗಾಗಿ ರಾಜ್​ ಕುಂದ್ರಾ ಅವರ ಪತ್ನಿ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರನ್ನು ಪೊಲೀಸರು ಇಂದು ವಿಚಾರಣೆಗೊಳಪಡಿಸಿದರು. ಈ ವೇಳೆ ನಟಿ ಶಿಲ್ಪಾ ಶೆಟ್ಟಿ ಪೊಲೀಸರ ಮುಂದೆ ಹಲವು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಅಶ್ಲೀಲ ಸಿನಿಮಾಗಳ ನಿರ್ಮಾಣ ಪ್ರಕರಣ

ರಾಜ್​ ಕುಂದ್ರಾ ಅವರ ಹಾಟ್​ಶಾಟ್ಸ್​​ ಆ್ಯಪ್​ ಬಗ್ಗೆ ನನಗೇನೂ ಗೊತ್ತಿಲ್ಲ. ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅದರಲ್ಲಿ ಯಾವ ರೀತಿ ಕಂಟೆಂಟ್​ ಇರುತ್ತದೆ ಎಂಬುದು ಕೂಡ ನನಗೆ ತಿಳಿದಿಲ್ಲ. ಆದರೆ, ಅವುಗಳು ಅಶ್ಲೀಲ ಸಿನಿಮಾಗಳಲ್ಲ ಅನ್ನೋದನ್ನು ಮಾತ್ರ ನಾನು ಖಚಿತವಾಗಿ ಹೇಳಬಲ್ಲೆ.

ಕಾರಣ ಅವರು ನಿರ್ಮಾಣ ಮಾಡಿದ್ದು ಕಾಮೋದ್ರೇಕದ ಚಿತ್ರಗಳು. ಎರಡಕ್ಕೂ ಬಹಳ ವ್ಯತ್ಯಾಸಗಳಿವೆ. ಹಾಗಾಗಿ ನನ್ನ ಗಂಡ ನಿರಪರಾಧಿ. ಹಾಟ್​ಶಾಟ್ಸ್ ಆ್ಯಪ್​ಅನ್ನು ಲಂಡನ್ ಮೂಲದ ನನ್ನ ಪತಿ ರಾಜ್​​ ಕುಂದ್ರಾ ಅವರ ಸಂಬಂಧಿ ಪ್ರದೀಪ್​ ಭಕ್ಷಿ ನಡೆಸುತ್ತಿದ್ದಾರೆ. ಇದರಲ್ಲಿ ರಾಜ್ ​​ಕುಂದ್ರಾ ಅವರ ಯಾವುದೇ ಪಾತ್ರವಿಲ್ಲ. ಅನಗತ್ಯವಾಗಿ ನನ್ನ ಪತಿಯ ಹೆಸರನ್ನು ಇದರಲ್ಲಿ ತಳುಕು ಹಾಕಲಾಗಿದೆ. ಇದೊಂದು ಪಿತೂರಿ ಎಂದು ಶಿಲ್ಪಾ ಶೆಟ್ಟಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಅಶ್ಲೀಲ ಸಿನಿಮಾಗಳ ನಿರ್ಮಾಣ ಪ್ರಕರಣ

ಇದನ್ನೂ ಓದಿ:ಪ್ರಭಾಸ್, ದೀಪಿಕಾ & ಬಿಗ್ ಬಿ ಅಭಿನಯಿಸುತ್ತಿರುವ ಚಿತ್ರದ ಶೂಟಿಂಗ್​ ಶುರು... ಯಾವುದಾ ಚಿತ್ರ?

ಅಶ್ಲೀಲ ಚಿತ್ರಗಳ ನಿರ್ಮಾಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಮತ್ತು ಅವರ ಸಹವರ್ತಿ ರಿಯಾನ್ ಥೋರ್ಪ್ ಅವರನ್ನು ಜುಲೈ 27 ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ತನಿಖೆ ಪ್ರಗತಿ ಹಂತದಲ್ಲಿದೆ. ಪ್ರಕರಣ ಸಂಬಂಧ ರಾಜ್​​ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಅವರ ಮುಂಬೈ ನಿವಾಸಕ್ಕೆ ನಿನ್ನೆ ಭೇಟಿ ನೀಡಿದ್ದ ಕ್ರೈಂ ಬ್ರಾಂಚ್​ ಪೊಲೀಸರು ಸತತ 6 ಗಂಟೆಗಳ ಕಾಲ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

Last Updated : Jul 25, 2021, 12:33 PM IST

ABOUT THE AUTHOR

...view details