ಕರ್ನಾಟಕ

karnataka

ETV Bharat / sitara

ಸೋಷಿಯಲ್​ ಮೀಡಿಯಾದಲ್ಲಿ ಹಾಟ್​ ಫೋಟೋಸ್​​​​​ ಹರಿಬಿಟ್ಟ ಮೌನಿ ರಾಯ್​,ರಾಧಿಕಾ - ನಟಿ ರಾಧಿಕ ಮದನ್​ ಲೇಟೆಸ್ಟ್ ನ್ಯೂಸ್

ಕಿರುತೆರೆಯಿಂದ ಇದೀಗ ಬಾಲಿವುಡ್​ಗೆ ಜಿಗಿದಿರುವ ನಟಿ ರಾಧಿಕ ಮದನ್​ ಹಾಗೂ ಮೌನಿ ರಾಯ್​​​ ತಮ್ಮ ಬೋಲ್ಡ್​​ ಫೋಟೋಸ್​ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.

Radhika Madan and Mouni Roy
ಮೌನಿ ರಾಯ್​,ರಾಧಿಕ

By

Published : Oct 29, 2021, 6:54 PM IST

ಹೈದರಾಬಾದ್:ಹಿಂದಿ ಕಿರುತೆರೆಯಲ್ಲಿ ಮಿಂಚಿ ಇದೀಗ ಬಾಲಿವುಡ್​ಗೆ ಎಂಟ್ರಿ ಕೊಟ್ಟಿರುವ ನಟಿ ರಾಧಿಕಾ ಮದನ್​ ಹಾಗೂ ಮೌನಿ ರಾಯ್​​​ ಹಾಟ್​​​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಹವಾ ಎಬ್ಬಿಸಿವೆ.

ನಟಿ ಮೌನಿ ರಾಯ್​ ದುಬೈನಲ್ಲಿ ತಮ್ಮ ರಜಾ ದಿನಗಳನ್ನು ಎಂಜಾಮ್ ಮಾಡುತ್ತಿದ್ದು, ಅಲ್ಲಿ ಮಾಡಿಸಿದ ಫೋಟೋಶೂಟ್‌ನ ಕೆಲವು ಫೋಟೋಗಳನ್ನು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಮಿಡ್ರಿಫ್-ಬೇರಿಂಗ್ ಟಾಪ್ ಮತ್ತು ಉದ್ದನೆಯ ಸ್ಕರ್ಟ್​ನಲ್ಲಿ ಮೌನಿ ಸಖತ್​​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋಗಳಿಗೆ 'ಇಫ್​ ಇಟ್​ ಫೀಲ್​ ಗುಡ್​​ ಇಟ್​ ಮಸ್ಟ್​​ ಬಿ' ಎಂದಿ ಶೀರ್ಷಿಕೆ ನೀಡಿದ್ದಾರೆ.

ಸದ್ಯ ಮೌನಿ ರಾಯ್​ ಅಯನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಅಮಿತಾಬ್​​ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ನಾಗಾರ್ಜುನ ಸೇರಿದಂತೆ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ನಡುವೆ ರಾಧಿಕಾ ಕೂಡ ಬೋಲ್ಡ್ ಸ್ಟೈಲ್ ಸ್ಟೇಟ್‌ಮೆಂಟ್ ನೀಡುವುದರಲ್ಲಿ ಬ್ಯುಸಿಯಾಗಿದ್ದು, ಛಾಯಾಗ್ರಾಹಕ ಪೆಹೆಲ್ ಅಗರ್ವಾಲ್ ಅವರೊಂದಿಗಿನ ಫೋಟೋಶೂಟಿನ ಪೋಟೋಗಳನ್ನು 'ಜಸ್ಟ್ ಹ್ಯಾಂಗ್ ಇನ್ ದೇರ್' ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ರಾಧಿಕಾ ಕೊನೆಯದಾಗಿ ಸನ್ನಿ ಕೌಶಲ್ ಜೊತೆಗೆ ಶಿದ್ದತ್​​​ನಲ್ಲಿ ಕಾಣಿಸಿಕೊಂಡಿದ್ದರು. ನಟಿ ತನ್ನ ಮುಂಬರುವ ಯೋಜನೆಗಳನ್ನು ಇನ್ನೂ ಘೋಷಿಸಿಲ್ಲ. ಇನ್ನು ಇಬ್ಬರು ನಟಿಯರ ಬೋಲ್ಡ್​​​ ಫೋಟೋಗಳಿಗೆ ಅಭಿಮಾನಿಗಳ ಪುಲ್​ ಫಿದಾ ಆಗಿದ್ದಾರೆ.

ಇದನ್ನೂ ಓದಿ: 'ಯುವರತ್ನ' ಸ್ಪೇನ್ ಚಿತ್ರೀಕರಣ ಕ್ಯಾನ್ಸಲ್ ಆಗಲು ಪುನೀತ್​​ಗೆ ಇದ್ದ ಆ ಅಭ್ಯಾಸವೇ ಕಾರಣವಂತೆ..

ABOUT THE AUTHOR

...view details