ಮುಂಬೈ: ಮುಂಬೈ ಕ್ರೈಂ ಬ್ರಾಂಚ್‌ನ ಪ್ರಾಪರ್ಟಿ ಸೆಲ್, ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾಗೆ ಸಮನ್ಸ್ ಜಾರಿಗೊಳಿಸಿದ್ದು, ಉದ್ಯಮಿ ರಾಜ್ ಕುಂದ್ರಾರನ್ನು ಬಂಧಿಸಿರುವ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಈ ಹಿಂದೆ ರಾಜ್ ಕುಂದ್ರಾ ನನ್ನ ಮೇಲೆಯೂ ಲೈಂಗಿಕ ಹಲ್ಲೆ ಮಾಡಿದ್ದರು ಎಂದು ಚೋಪ್ರಾ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೆ, 2019ರ ಆರಂಭದಲ್ಲಿಯೇ ಒಂದು ಆ್ಯಪ್ ಬ್ಯುಸಿನೆಸ್ಗಾಗಿ ನನ್ನನ್ನು ಕರೆದಿದ್ದರು. ಮೀಟಿಂಗ್ ಮುಗಿದ ಬಳಿಕ ಅವರು ನನ್ನ ಜೊತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದರು. ಇದರಿಂದ ನಮ್ಮ ನಡುವೆ ಜಗಳ ಶುರುವಾಯಿತು. ನಾನು ಬೇಡ ಎಂದು ವಿರೋಧಿಸಿದರೂ ಕೂಡ ರಾಜ್ ಕುಂದ್ರಾ ಬಲವಂತವಾಗಿ ಕಿಸ್ ಮಾಡಲು ಮುಂದಾದರು. ಆತನನ್ನು ತಡೆದು, ನಾನು ಅಲ್ಲಿಂದ ಓಡಿ ಹೋದೆ. ಬಳಿಕ ಶೌಚಾಲಯಕ್ಕೆ ತೆರಳಿ ಅಡಗಿ ಕುಳಿತುಕೊಂಡೆ ಎಂದು ಶೆರ್ಲಿನ್ ಆರೋಪಿಸಿದ್ದರು.
ಇದನ್ನೂ ಓದಿ: Raj Kundra Case: ಟ್ವಿಟರ್ನಲ್ಲಿ ಮಹತ್ವದ ಮಾಹಿತಿ ಹರಿಬಿಟ್ಟ ಶೆರ್ಲಿನ್ ಚೋಪ್ರಾ