ಕರ್ನಾಟಕ

karnataka

ETV Bharat / sitara

ಡ್ರಗ್ಸ್​​​ ವಿಚಾರಕ್ಕೆ ಸಂಬಂಧಿಸಿದಂತೆ ಎನ್​​ಸಿಬಿ ಮುಂದೆ ಮೂವರ ಹೆಸರು ಬಾಯ್ಬಿಟ್ಟ ರಿಯಾ - ಎನ್​​ಸಿಬಿ ವಿಚಾರಣೆಯಲ್ಲಿ ರಿಯಾ ಚಕ್ರವರ್ತಿ

ಸುಶಾಂತ್ ಸಿಂಗ್ ರಜಪೂತ್ ಹಾಗೂ ನನಗೆ ಮೂವರು ನಟಿಯರು ಡ್ರಗ್ಸ್ ತಂದು ನೀಡುತ್ತಿದ್ದರು ಎಂದು ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಎನ್​​ಸಿಬಿ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ.

NCB radar
ರಿಯಾ ಚಕ್ರವರ್ತಿ

By

Published : Sep 12, 2020, 2:54 PM IST

ಸ್ಯಾಂಡಲ್​​ವುಡ್​​ನಲ್ಲಿ ಆರಂಭವಾದ ಡ್ರಗ್ಸ್ ಪ್ರಕರಣ ಇದೀಗ ಬಾಲಿವುಡ್​​​ಗೂ ಕಾಲಿಟ್ಟಿದೆ. ಇಷ್ಟು ದಿನ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಇದೀಗ ಡ್ರಗ್ಸ್ ವಿಚಾರಣೆ ಎದುರಿಸುತ್ತಿದ್ದಾರೆ.

ನಿನ್ನೆ ಎನ್​​ಸಿಬಿ ವಿಚಾರಣೆಯಲ್ಲಿ ಸಾರಾ ಅಲಿಖಾನ್​, ರಕುಲ್ ಪ್ರೀತ್ ಸಿಂಗ್ ಹಾಗೂ ಫ್ಯಾಷನ್ ಡಿಸೈನರ್​ ಖಂಬಟ್ಟಾ ಕೂಡಾ ಡ್ರಗ್ಸ್ ಸೇವಿಸುತ್ತಾರೆ ಎಂದು ನಟಿ ರಿಯಾ ಚಕ್ರವರ್ತಿ ಹೇಳಿದ್ದಾರೆ.

ಈ ಮೂವರೂ ತನಗೆ ಹಾಗೂ ಸುಶಾಂತ್​​​​ಗೆ ಡ್ರಗ್ಸ್​ ತಂದು ನೀಡುತ್ತಿದ್ದರು ಎಂದು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ರಿಯಾ ಹೇಳಿರುವ ಪ್ರಕಾರ ಬಾಲಿವುಡ್​​​ನ ಶೇಕಡ 80 ರಷ್ಟು ನಟ-ನಟಿಯರು ಡ್ರಗ್ಸ್​​​​​​​​​​ಗೆ ಅಡಿಕ್ಟ್​ ಆಗಿದ್ದು ಸದ್ಯಕ್ಕೆ ಸುಮಾರು 25 ಮಂದಿ ನಟ-ನಟಿಯರನ್ನು ಎನ್​​ಸಿಬಿ ವಿಚಾರಣೆಗೆ ಕರೆಸಲಾಗುವುದು ಎನ್ನಲಾಗುತ್ತಿದೆ.

ರಕುಲ್ ಪ್ರೀತ್ ಸಿಂಗ್, ಸಾರಾ ಅಲಿಖಾನ್

ಮತ್ತೊಂದು ವರದಿಯ ಪ್ರಕಾರ ಸ್ಟಾರ್​ ಕಿಡ್​​​ಗಳನ್ನು ಬಾಲಿವುಡ್​​​ಗೆ ಪರಿಚಯಿಸುತ್ತಿರುವ ಹಾಗೂ ​​​​​​​​​​​​​​ ಭೂಗತ ಲೋಕದ ವ್ಯಕ್ತಿಗಳಿಂದ ಹಣ ಪಡೆಯುತ್ತಿರುವ ನಿರ್ಮಾಪಕರೊಬ್ಬರ ಮೇಲೆ ಕೂಡಾ ಎನ್​ಸಿಬಿ ಕಣ್ಣಿಟ್ಟಿದೆ. 5 ಎನ್​ಸಿಬಿ ತಂಡ ಸದ್ಯಕ್ಕೆ ಈ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದೆ ಎನ್ನಲಾಗಿದೆ. ಇನ್ನು ಸುಶಾಂತ್​ ಸಿಂಗ್ ರಜಪೂತ್​​ಗೆ ಡ್ರಗ್ಸ್ ನೀಡುವುದು ಹಾಗೂ ಹಣಕಾಸಿನ ನಿರ್ವಹಣೆ ಮಾಡುತ್ತಿದ್ದಾಗಿ ರಿಯಾ ಚಕ್ರವರ್ತಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಸುಶಾಂತ್ ಆತ್ಮಹತ್ಯೆ ಪ್ರಕರಣದ ಮೂಲಕ ಆರಂಭವಾದ ವಿಚಾರಣೆ ಈಗ ಡ್ರಗ್ಸ್ ಮಾಫಿಯಾವರೆಗೂ ಬಂದು ನಿಂತಿದ್ದು ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕು.

ABOUT THE AUTHOR

...view details