ನಿಕ್ ಜೋನಸ್ ಹಾಗೂ ಆತನ ಸಹೋದರರ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಅಲ್ಲಿನ ಕೆಲವು ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನ್ಯೂಯಾರ್ಕ್ಗೆ ಹಾರಿದ ಬಾಲಿವುಡ್ ಬೆಡಗಿ: ಕಾರ್ಯಕ್ರಮದಲ್ಲಿ ಗಂಡನನ್ನು ಹುರಿದುಂಬಿಸಿದ ಪಿಗ್ಗಿ - etv bharat
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಗಂಡನ ಮನೆಗೆ ತೆರೆಳಿದ್ದಾರೆ. ಬಹಳ ದಿನಗಳ ನಂತರ ನ್ಯೂಯಾರ್ಕ್ಗೆ ತೆರಳಿರುವ ಪಿಗ್ಗಿ, ಪತಿ ನಿಕ್ ಜೋನಸ್ ರೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್
ಜೋನಸ್ ಸಹೋದರರಾದ ನಿಕ್, ಜೋ ಮತ್ತು ಕೆನೆನ್ ಅವರು ನಡೆಸಿಕೊಟ್ಟ 'ಬಿಎಲ್ಐ ಸಮ್ಮರ್ ಜಾಮ್-2019' ಕಾರ್ಯಕ್ರಮದಲ್ಲಿ ಪರ್ಫಾರ್ಮೆನ್ಸ್ ನೀಡಿದರು. ಈ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಿಗ್ಗಿ, ಹಾಡಿಗೆ ತಕ್ಕಂತೆ ಕೆಲವು ಸ್ಟೆಪ್ ಹಾಕಿ ಅವರನ್ನು ಹುರಿದುಂಬಿಸಿದರು.
ಗಂಡನ ಜೊತೆ ಖುಷಿಯಲ್ಲಿರುವ ಪ್ರಿಯಾಂಕ, ನೂಯಾರ್ಕ್ನಲ್ಲಿ ಪತಿ ನಿಕ್ ಜೊತೆ ಸುತ್ತಾಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಪತಿಯ ಕಾರ್ಯಕ್ರಮ, ಸಭೆ, ಸಮಾರಂಭ, ಶಾಪಿಂಗ್ಗೆ ತೆರಳಿದ ಕೆಲವು ಪೋಟೋಗಳನ್ನು ಇನ್ಸ್ಟಾಗ್ರಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.