ಹೈದರಾಬಾದ್:ಅಂತಾರಾಷ್ಟ್ರೀಯ ತಾರೆ ಪ್ರಿಯಾಂಕಾ ಚೋಪ್ರಾ ಜೊನಸ್ ತನ್ನ ಆತ್ಮಚರಿತ್ರೆ 'ಅನ್ಫಿನಿಶ್ಡ್'ನಲ್ಲಿ ತಾನು 2000ರ ಮಿಸ್ ವರ್ಲ್ಡ್ ಪ್ರಶಸ್ತಿ ಪಡೆದ ನಂತರ ನಿರ್ದೇಶಕರೊಬ್ಬರು ಪ್ಲಾಸ್ಟಿಕ್ ಸರ್ಜರಿ ಮೂಲಕ ತನ್ನ ಅಂಗಗಳನ್ನು ಸರಿಪಡಿಸಲು ಕೇಳಿಕೊಂಡ ಬಗ್ಗೆ ಮಾತನಾಡಿದ್ದಾರೆ.
ಬೃಹತ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ಯಶಸ್ವಿಯಾಗಲು ಏನೆಲ್ಲಾ ಮಾಡಬೇಕು ಹಾಗೂ ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ಪ್ರಿಯಾಂಕಾ ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಸವಾಲುಗಳ ವಿವರಗಳನ್ನು ಓದುಗರು ಈ ಪುಸ್ತಕದಲ್ಲಿ ಕಾಣಬಹುದು.