ಕರ್ನಾಟಕ

karnataka

ETV Bharat / sitara

ನಟಿ ಪ್ರಿಯಾಂಕ ಚೋಪ್ರಾ ಪತಿ ನಿಕ್​ ಜೋನಸ್​ಗೆ ಶೂಟಿಂಗ್​ ವೇಳೆ ಗಾಯ - ಚಿತ್ರೀಕರಣದ ವೇಳೆ ನಿಕ್​ ಜೋನಸ್​ಗೆ ಗಾಯ

ಅಮೆರಿಕನ್​ ಪಾಪ್​ ಸ್ಟಾರ್​ ಹಾಗೂ ಬಾಲಿವುಡ್​ ನಟಿ ಪ್ರಿಯಾಂಕ ಚೋಪ್ರಾ ಪತಿ ನಿಕ್​ ಜೋನಸ್​ ಹೊಸ ಶೋ ಒಂದರ ಚಿತ್ರೀಕರಣದ ವೇಳೆ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಆರಾಮಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

priyanka
priyanka

By

Published : May 18, 2021, 3:44 PM IST

ಲಾಸ್​ ಏಂಜಲೀಸ್​:ಪಾಪ್​ ಗಾಯಕ ಹಾಗೂ ಬಾಲಿವುಡ್​ ನಟಿ ಪ್ರಿಯಾಂಕ ಚೋಪ್ರಾ ಪತಿ ನಿಕ್​ ಜೋನಸ್​ ಕಾರ್ಯಕ್ರಮವೊಂದರ ಶೂಟಿಂಗ್​ ವೇಳೆ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎನ್‌ಬಿಸಿ ಗಾಯನ ಸ್ಪರ್ಧೆಯ ಸಿರೀಸ್ ಹಿನ್ನೆಲೆ​ ಸೆಟ್​​ನಲ್ಲಿ ಶೂಟಿಂಗ್​ನಲ್ಲಿದ್ದ ವೇಳೆ ಶನಿವಾರ ತಡರಾತ್ರಿ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಈ ಕುರಿತು ನಿಕ್​ ಪ್ರತಿಕ್ರಿಯಿಸಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ, ನಾನು ಆರಾಮಾಗಿದ್ದೇನೆ ಎಂದು ಹೇಳಿದ್ದಾರೆ. ಆದರೆ ಪ್ರಿಯಾಂಕ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಏನೂ ಹೇಳಿಕೊಂಡಿಲ್ಲ.

ಇದಕ್ಕೂ ಮೊದಲು, 2018 ರಲ್ಲಿ ಮೆಕ್ಸಿಕೋದಲ್ಲಿ ನಡೆದ ಕಾರ್ಯಕ್ರಮದ ವೇಳೆ ಪ್ರಾಕ್ಟೀಸ್​ ನಡೆಸುವಾಗ ಸಹ 28 ರ ಹರೆಯದ ಖ್ಯಾತ ಗಾಯಕ ನಿಕ್​ ಕೈಗೆ ಪೆಟ್ಟಾಗಿತ್ತು.

ABOUT THE AUTHOR

...view details