ಫ್ರಾನ್ಸ್ನಲ್ಲಿ ನಡೆದ ಪತಿ ನಿಕ್ ಜೋನ್ಸ್ ಸಹೋದರ ಜೋ ಜೊನ್ಸ್ ಮತ್ತು ಸೋಫಿಯಾ ಟರ್ನರ್ ಅವರ ವಿವಾಹ ಸಮಾರಂಭದಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಭಾವುಕರಾಗಿದ್ದ ಕೆಲವು ಪೋಟೋಗಳು ಹರಿದಾಡುತ್ತಿವೆ. ಆದ್ರೆ, ಏಕೆ ಕಣ್ಣೀರು ಹಾಕಿದರು ಅನ್ನೋದು ಮಾತ್ರ ಗೊತ್ತಿಲ್ಲ.
ಪತಿ ಮುಂದೆ ಕಣ್ಣೀರು ಸುರಿಸಿದ ಪಿಗ್ಗಿ..! ಕಾರಣ ಏನಿರಬಹುದು? - etv bharat
ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಕಣ್ಣೀರು ಸುರಿಸಿದ್ದಾರೆ. ಹೀಗೆಂದು ಇಲ್ಲಿರುವ ಕೆಲವು ಪೋಟೋಗಳು ಹೇಳಿತ್ತಿವೆ.
ಕಣ್ಣೀರು ಸುರಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಗುಲಾಬಿ ಬಣ್ಣದ ಸೀರೆಯುಟ್ಟು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಪಿಗ್ಗಿ, ಪತಿ ನಿಕ್ ಜೋನ್ಸ್ ಜೊತೆ ತೆರಳುತ್ತಿರುವಾಗ ಅಳುತ್ತಾ ಕಣ್ಣೀರು ಒರೆಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂದಿತು. ದಕ್ಷಿಣ ಫ್ರಾನ್ಸ್ನಲ್ಲಿ ನಿನ್ನೆ (ಜೂ. 30) ಸೋಫಿಯಾ ಮತ್ತು ಜೋ ಅವರ ವಿವಾಹ ನಡೆಯಿತು. ವಿವಾಹ ಸಮಾರಂಭದಲ್ಲಿ ಇವರು ಪಾಲ್ಗೊಂಡಿದ್ದರು.
ಇನ್ನು ಪ್ರಿಯಾಂಕಾ ಮತ್ತು ನಿಕ್ ಜೋನ್ಸ್ ಕಳೆದ ವರ್ಷ ಡಿಸೆಂಬರ್ನಲ್ಲಿ ಜೋಧಪುರದ ಅರಮನೆಯೊಂದರಲ್ಲಿ ಹಿಂದೂ ಮತ್ತು ಕ್ರೈಸ್ತ ಪದ್ಧತಿಗಳ ಪ್ರಕಾರ ಮದುವೆಯಾಗಿದ್ದರು. ಪ್ರಿಯಾಂಕಾ ಛೋಪ್ರಾ ದಿ ಸ್ಕೈ ಈಸ್ ಪಿಂಕ್ ಚಿತ್ರದೊಂದಿಗೆ ಬಾಲಿವುಡ್ಗೆ ಮರಳಿದ್ದು ಚಿತ್ರ ಅ. 11 ರಂದು ತೆರೆಗೆ ಬರಲಿದೆ ಎಂದು ಚಿತ್ರ ನಿದೇಶಕರು ತಿಳಿಸಿದ್ದಾರೆ.