ಹೈದರಾಬಾದ್: ತುಂಡು ಬಟ್ಟೆ ತೊಡುವ ಮೂಲಕ ಬಾಲಿವುಡ್ ನಟಿ, ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಮತ್ತೆ ನೆಟಿಜನ್ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹಾಲಿವುಡ್ ಸಿನಿಮಾವೊಂದರಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಬಿಡುವಿನ ಸಮಯದಲ್ಲಿ ಪತಿ ನಿಕ್ ಜೋನಸ್ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಅಮೆರಿಕದಲ್ಲಿರುವ ಪಿಗ್ಗಿ ದಂಪತಿ ಬೀಚ್ವೊಂದರಲ್ಲಿ ಕಾಲ ಕಾಳೆಯುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೀಚ್ನಲ್ಲಿ ಕೆಂಪು ಮತ್ತು ಕಪ್ಪು ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ಬೆಡಗಿ ಮರಳಿನ ಮೇಲೆ ಮಲಗಿಕೊಂಡರೆ ಪತಿ ನಿಕ್ ಜೋನಸ್ ಅವಳ ಪಕ್ಕದಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದಾನೆ. ಆದರೆ, ಅತಿರೇಕದ ಹರಟೆಯಿಂದ ನೆಟಿಜನ್ಗಳು ತರಾಟೆ ತೆಗೆದುಕೊಂಡಿದ್ದಾರೆ.
ಆಗಾಗ್ಗೆ ಹಾಟ್ ಹಾಗೂ ಹಸಿ ಬಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪ್ರಿಯಾಂಕಾ ಸುದ್ದಿಗೆ ಆಹಾರವಾಗುವುದು ಸಾಮಾನ್ಯ. ಆದರೆ, ಇಂದಿನ ಅತಿರೇಕದ ಭಂಗಿ ನೋಡಿದ ನೆಟ್ಟಿಗರು, ಪ್ರಿಯಾಂಕಾ ಚೋಪ್ರಾ ಈ ನೆಲದ ಸಂಸ್ಕಾರವನ್ನು ಮರೆತುಬಿಟ್ಟರಾ? ಎಂದು ಕಮೆಂಟ್ ಮಾಡುತ್ತಿದ್ದಾರೆ. ಸಾಲದಕ್ಕೆ ಇಂತಹ ಫೋಟೋ ಹಾಕಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನೂ ಕೆಲವರು ಜೋಡಿಯ ಹರಟೆಗೆ ಫಿದಾ ಆಗಿದ್ದಾರೆ. ಈ ಹಿಂದೆಯೂ ಪ್ರಿಯಾಂಕಾ ರವಿಕೆ ಇಲ್ಲದೆ ಸೀರೆಯುಟ್ಟು ಡ್ಯಾನ್ಸ್ ಮಾಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ಆಗಲೂ ಸಹ ಪ್ರಿಯಾಂಕಾ ಚೋಪ್ರಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು.