ಹೈದರಾಬಾದ್:ವಿಭಿನ್ನವಾದ ಕಥೆಗಳನ್ನು ಸವಿಯಲು ಪ್ರೇಕ್ಷಕರಿಗೆ ಅವಕಾಶ ನೀಡಿದ್ದಲ್ಲದೆ, ಚಿತ್ರರಂಗವನ್ನು ಪ್ರಜಾಪ್ರಭುತ್ವಗೊಳಿಸಿದ್ದರಿಂದ ಜನರು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಅಳವಡಿಸಿಕೊಳ್ಳಬೇಕು ಎಂದು ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಕರೆ ನೀಡಿದ್ದಾರೆ. ಈ ವರ್ಷ ನೆಟ್‌ಫ್ಲಿಕ್ಸ್ ಚಲನಚಿತ್ರ 'ದಿ ವೈಟ್ ಟೈಗರ್' ಮೂಲಕ ಡಿಜಿಟಲ್ ಫ್ಲಾಟ್ಫಾರ್ಮ್ಗೆ ಚೊಚ್ಚಲ ಪ್ರವೇಶ ಮಾಡಿರುವ ಚೋಪ್ರಾ ಜೊನಾಸ್, ಸ್ಟ್ರೀಮಿಂಗ್ ಸೇವೆಗಳಿಂದಾಗಿ ಕಲಾವಿದರನ್ನು ಬಾಲಿವುಡ್ ಚಿತ್ರದ "ಸೂತ್ರ" ದ ಹೊರಗೆ ಯೋಚಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಭಾರತೀಯ ಸಿನೆಮಾದಲ್ಲಿ ನೀವು ನೋಡುತ್ತಿರುವುದು ಅದನ್ನೇ - ಸ್ಟ್ರೀಮಿಂಗ್ ಸೇವೆಗಳ ಸ್ವಾತಂತ್ರ್ಯವು ಮೊದಲು ಅಸ್ತಿತ್ವದಲ್ಲಿದ್ದ ಸೂತ್ರಕ್ಕಿಂತ ದೊಡ್ಡ ಆಲೋಚನೆಗಳನ್ನು ಹೊಂದಲು ಜನರಿಗೆ ಅವಕಾಶ ಮಾಡಿಕೊಡುತ್ತದೆ. ಇದಕ್ಕಿಂತ ಮೊದಲಿದ್ದ ಸಿನೆಮಾಗಳಲ್ಲಿ ಐದು ಹಾಡುಗಳು, ಫೈಟ್ ಸೀನ್ಗಳು ಇರುತ್ತಿದ್ದವು. ಆದರೀಗ ಆ ಆಲೋಚನೆ ಹೋಗಿದೆ. ಈಗ ಜನರು ನೈಜ ಕಥೆಗಳನ್ನು ಬಯಸುತ್ತಾರೆ ಎಂದು ನಟಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಯುಎಸ್ನ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜೀ 5ನ ಪ್ರಾರಂಭದ ವರ್ಚುಯಲ್ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ಟ್ರೀಮಿಂಗ್ ಸೇವೆಗಳ ಉತ್ಕರ್ಷವು, ವಿಶೇಷವಾಗಿ ಭಾರತದಲ್ಲಿ, "ನಿರ್ದಿಷ್ಟ ಸಂಖ್ಯೆಯ ಜನರ" ಏಕಸ್ವಾಮ್ಯ ಮುರಿದುಬಿಟ್ಟಿದೆ, ಇದರ ಪರಿಣಾಮವಾಗಿ ಹೊಸ ಕಥೆ ಬರುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.