ಕರ್ನಾಟಕ

karnataka

ETV Bharat / sitara

ಪ್ರಿಯಾಂಕಾ ಚಿತ್ರದ ಬೆಡ್​​​ರೂಮ್​ ವಿಡಿಯೋ ಲೀಕ್​..!​​ - ದಿ ಸ್ಕೈ ಈಸ್ ಪಿಂಕ್ ಚಿತ್ರದ ವಿಡಿಯೋ ಲೀಕ್​

ಬಾಲಿವುಡ್​​ ನಟಿ ಪ್ರಿಯಾಂಕಾ ಚೋಪ್ರಾ ನಟ ಫರ್ಹಾನ್ ಅಖ್ತರ್ ಅವರೊಂದಿಗೆ ಸಿನಿಮಾವೊಂದರಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದ ವಿಡಿಯೋವೊಂದು ಲೀಕ್​ ಆಗಿದೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ. ಬೆಡ್​ರೂಮ್​ನಲ್ಲಿ ನಟನೊಂದಿಗೆ ರೋಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ಇದಾಗಿದ್ದು ದೃಶ್ಯ ನೋಡಿದ ಪಿಗ್ಗಿ ಅಭಿಮಾನಿಗಳು ಶಾಕ್​ ಆಗಿದ್ದಾರೆ.

'ದಿ ಸ್ಕೈ ಈಸ್ ಪಿಂಕ್'- ಸಂಗ್ರಹ ಚಿತ್ರ

By

Published : Oct 10, 2019, 12:04 PM IST

Updated : Oct 10, 2019, 1:29 PM IST

ನಟ ಫರ್ಹಾನ್ ಹಾಗೂ ನಟಿ ಪ್ರಿಯಾಂಕಾ ಅರೆ ಬೆತ್ತಲೆಯಲ್ಲಿ ಬೆಡ್​ರೂಮ್​ನಲ್ಲಿ ಒಬ್ಬರಿಗೊಬ್ಬರು ಎದುರು ನೋಡುತ್ತಾ ಕುಳಿತಿರುವ ದೃಶ್ಯ ಇದಾಗಿದೆ. ಈ ಜೋಡಿ 'ದಿ ಸ್ಕೈ ಈಸ್ ಪಿಂಕ್' ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಚಿತ್ರ ಇಂದು ಬಿಡುಗಡೆಯಾಗಿದೆ. ಇನ್ನು ಚಿತ್ರ ತಂಡವೇ ಪ್ರಚಾರಕ್ಕಾಗಿ ಈ ವಿಡಿಯೋವನ್ನು ಲೀಕ್​ ಮಾಡಿದೆ ಎಂದು ಹೇಳಲಾಗುತ್ತಿದೆ.

ಇದೆಲ್ಲದರ ನಡುವೆ ಈ ವಿಡಿಯೋ ನೋಡಿದ ಕೆಲವರು ಸೋಷಿಯಲ್​ ಮೀಡಿಯಾದಲ್ಲಿ ಕಮೆಂಟ್​ ಮಾಡಿದ್ದಾರೆ. ಇನ್ನು ಪಾಪ್​ ಗಾಯಕ ನಿಕ್​ ಜೋನಸ್​ನೊಂದಿಗೆ​ ಮದುವೆಯಾದ ಬಳಿಕ ಮತ್ತೆ ಬಾಲಿವುಡ್​ನಲ್ಲಿ​ ಕಾಣಿಸಿಕೊಂಡಿರುವ ಬಿಟೌನ್​ ಬೆಡಗಿ ಪ್ರಿಯಾಂಕಾ, 'ದಿ ಸ್ಕೈ ಈಸ್ ಪಿಂಕ್'ನಲ್ಲಿ ಯಾವ ರೀತಿ ಅಭಿನಯಿಸಿದ್ದಾರೆ ಅನ್ನೋದನ್ನು ಚಿತ್ರ ನೋಡಿದವರೇ ಹೇಳಬೇಕು.

Last Updated : Oct 10, 2019, 1:29 PM IST

ABOUT THE AUTHOR

...view details