ಕರ್ನಾಟಕ

karnataka

ETV Bharat / sitara

ಧಾರ್ಮಿಕವಾಗಿ ಏನೇ ಮಾಡಿದ್ರೂ ಪತಿ ನಿಕ್‌ ಜೋನಾಸ್‌ ಸಂಪೂರ್ಣ ಬೆಂ'ಬಲ' - ನಟಿ ಪ್ರಿಯಾಂಕಾ ಚೋಪ್ರಾ - ಪ್ರಿಯಾಂಕಾ ಚೋಪ್ರಾ ಫೋಟೋಗಳು

ಧಾರ್ಮಿಕವಾಗಿ ತಾವು ಏನೇ ಮಾಡಿದರೂ ತಮ್ಮ ಪತಿ ನಿಕ್‌ ಜೋನಾಸ್‌ ಬೆಂಬಲ ನೀಡುತ್ತಾರೆ ಎಂದು ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹೇಳಿ ಕೊಂಡಿದ್ದಾರೆ.

Priyanka Chopra reveals Nick Jonas asks her to perform puja whenever they start something new
ಧಾರ್ಮಿಕವಾಗಿ ಏನೇ ಮಾಡಿದ್ರೂ ಪತ್ನಿ ನಿಕ್‌ ಜೋನಾಸ್‌ ಸಂಪೂರ್ಣ ಬೆಂ'ಬಲ' - ನಟಿ ಪ್ರಿಯಾಂಕಾ ಚೋಪ್ರಾ

By

Published : Oct 8, 2021, 2:41 PM IST

ಮುಂಬೈ: ಇತ್ತೀಚೆಗಷ್ಟೇ ತಮ್ಮ ಮದುವೆಯಲ್ಲಿ ಪತಿ ನಿಕ್‌ ಜೋನಾಸ್‌ ಹಾಗೂ ತಾವು ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಬಗ್ಗೆ ಮಾತನಾಡಿದ್ದ ಬಹುಭಾಷಾ ಸ್ಟಾರ್‌ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಮತ್ತೊಂದು ವಿಷಯ ಬಹಿರಂಗ ಪಡಿಸಿದ್ದಾರೆ.

ನಿಕ್‌ ಮತ್ತು ಪ್ರಿಯಾಂಕಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಸಂಬಂಧದಲ್ಲಿ ಹೇಗೆ ನಂಬಿಕೆ ಉಳಿಸಿಕೊಂಡಿದ್ದೇವೆ ಎಂಬುದರ ಬಗ್ಗೆ ಮಾತನಾಡಿದ್ದು, ಅಂತಿಮವಾಗಿ ಧರ್ಮವು ಅದೇ ಗಮ್ಯಸ್ಥಾನವನ್ನು ತಲುಪುತ್ತದೆ. ಅದು ದೇವರು ಎಂದು ತಾನು ನಂಬಿದ್ದೇನೆ ಎಂದು ಹೇಳಿದ್ದಾರೆ.

ನಾವೆಲ್ಲರೂ ಒಂದೇ ದಿಕ್ಕಿನಲ್ಲಿ ಉನ್ನತ ಶಕ್ತಿಯತ್ತ ಸಾಗುತ್ತಿದ್ದೇವೆ ಎಂದಿರುವ ಚೋಪ್ರಾ, ತಮ್ಮ ಮನೆಯಲ್ಲಿ ಸಾಕಷ್ಟು ರೀತಿಯ ಪೂಜೆ ಪುನಸ್ಕಾರಗಳನ್ನು ಮಾಡುತ್ತೇವೆ. ಆಗ ಪತಿ ನಿಕ್‌ ಇದಕ್ಕೆ ಬೆಂಬಲ ಸೂಚಿಸಿ ಏನಾದರೂ ಹೊಸದನ್ನು ಮಾಡುವ ಮುನ್ನ ಪೂಜೆ ಮಾಡು ಎಂದು ಹೇಳುತ್ತಾರಂತೆ. ಈಕೆ ತನ್ನ ಜೀವನದಲ್ಲಿ ಏನೇ ವಿಶೇಷವಾದದ್ದನ್ನು ಮಾಡಿದರೂ ಪ್ರಾರ್ಥನೆ ಮಾಡಿ ದೇವರಿ ಧನ್ಯವಾದ ಹೇಳುತ್ತಾರೆ. ಮೊದಲನಿಂದಲೂ ಇವರ ಕುಟುಂಬದಲ್ಲಿ ಇಂತಹ ಸಂಪ್ರದಾಯ ಪಾಲನೆ ಮಾಡಿಕೊಂಡು ಬಂದಿರುವುದಾಗಿ ಹೇಳಿಕೊಂಡಿದ್ದಾರೆ.

ವಿವಾಹದ ವೇಳೆ ಹಿಂದೂ ಸಂಪ್ರದಾಯದ ಉಡುಗೆಯಲ್ಲಿ ಪ್ರಿಯಾಂಕಾ, ನಿಕ್‌

2018ರಲ್ಲಿ ಅಮೆರಿಕದ ಸಿಂಗರ್‌ ಕ್ರೈಸ್ತ ಸಮುದಾಯದ ನಿಕ್‌ ಜೋನಾಸ್‌ ಅವರನ್ನು ಪ್ರಿಯಾಂಕಾ ಜೋಪ್ರಾ ವರಿಸಿದ್ದರು. ಕ್ರಿಶ್ಚಿಯನ್‌ ಹಾಗೂ ಹಿಂದೂ ಎರಡೂ ಸಂಪ್ರದಾಯಗಳ ಪ್ರಕಾರ ವಿವಾಹ ಕಾರ್ಯಕ್ರಮಗಳನ್ನು ಮಾಡಿಕೊಂಡಿದ್ದು, ವಿಶೇಷವಾಗಿತ್ತು.

ಕ್ರಿಶ್ಚಿಯನ್‌ ಸಂಪ್ರದಾಯದ ವಿವಾಹದಲ್ಲಿ ಪ್ರಿಯಾಂಕಾ, ನಿಕ್‌

ABOUT THE AUTHOR

...view details