ಮುಂಬೈ (ಮಹಾರಾಷ್ಟ್ರ):ಬಾಡಿಗೆ ತಾಯ್ತನದ ಮೂಲಕ ಮಗು ಪಡೆದುಕೊಂಡ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಇದೀಗ ತಮ್ಮ ತಂದೆ-ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರಿದ್ದಾರೆ. ಅಲ್ಲದೇ ತಮ್ಮ ತಂದೆಯ ಅನುಪಸ್ಥಿತಿಯನ್ನು ನೆನೆದು ಭಾವುಕರಾಗಿದ್ದಾರೆ.
ನಟಿ ಪ್ರಿಯಾಂಕಾ ಛೋಪ್ರಾ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ತಂದೆ, ತಾಯಿ ಇರುವ ಫೋಟೋ ಹಂಚಿಕೊಂಡಿದ್ದು, 'ನಿಮ್ಮ ವಿವಾಹ ವಾರ್ಷಿಕೋತ್ಸವವನ್ನು ನಾನು ಹೀಗೆಯೇ ನೆನಪಿಸಿಕೊಳ್ಳುವೆ. ಮಿಸ್ ಯೂ ಅಪ್ಪ..ಲವ್ ಯೂ' ಎಂದು ಬರೆದುಕೊಂಡಿದ್ದಾರೆ.
ಚಿತ್ರದಲ್ಲಿ ಪ್ರಿಯಾಂಕಾ ಅವರ ತಂದೆ ಗುಲಾಬಿ ಹೂವನ್ನು ತಾಯಿ ಮಧು ಅಖೌರಿ ಛೋಪ್ರಾಗೆ ನೀಡುತ್ತಿರುವುದನ್ನು ಕಾಣಬಹುದು. ಪ್ರಿಯಾಂಕಾರ ತಂದೆ 2013 ರಲ್ಲಿ ಕ್ಯಾನ್ಸರ್ ರೋಗದಿಂದ ನಿಧನರಾದರು. ತಂದೆಯ ಮುದ್ದಿನ ಮಗಳಾಗಿದ್ದ ಪ್ರಿಯಾಂಕಾರ ಬಲಗೈ ಮೇಲೆ 'ಅಪ್ಪನ ಲಿಲ್ ಗರ್ಲ್' ಎಂದು ಬರೆದಿರುವ ಹಚ್ಚೆ ಇದೆ.
ಇನ್ನು ಪ್ರಿಯಾಂಕಾ ಛೋಪ್ರಾ, ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಫರ್ಹಾನ್ ಅಖ್ತರ್ ಅವರ 'ಜೀ ಲೆ ಜರಾ'ದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಓದಿ:ದಾಂಪತ್ಯಕ್ಕೆ ಕಾಲಿಟ್ಟ ಬಾಲಿವುಡ್ನ ವಿಕ್ರಾಂತ್, ಶೀತಲ್: ಫೋಟೋಗಳನ್ನು ನೋಡಿ