ಮುಂಬೈ:ತನಗಿಂತ ಹತ್ತು ವರ್ಷ ಚಿಕ್ಕವನಾದ ನಿಕ್ ಜೋನ್ಸ್ನನ್ನು ವರಿಸುವ ಮೂಲಕ ಭಾರೀ ಸುದ್ದಿಯಾದ ನಟಿ ಪ್ರಿಯಾಂಕಾ ಛೋಪ್ರಾ ಇದೀಗ ಮತ್ತೆ ಟ್ವಿಟರ್ನಲ್ಲಿ ಟ್ರೋಲ್ಗೆ ಗುರಿಯಾಗಿದ್ದಾರೆ.
ಟ್ರೋಲ್ ಆಯ್ತು ಪಿಗ್ಗಿ ಹೇರ್ ಸ್ಟೈಲ್... ವೀರಪ್ಪನ್ ಮೀಸೆಗೆ ಹೋಲಿಸಿದ ನೆಟ್ಟಿಗರು - ಪ್ರಿಯಾಂಕಾ ಹೇರ್ ಸ್ಟೈಲ್
ಇತ್ತೀಚೆಗೆ ನ್ಯೂಯಾರ್ಕ್ ಫ್ಯಾಷನ್ ವೀಕ್ನಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ ಛೋಪ್ರಾ ಅವರ ಹೇರ್ಸ್ಟೈಲ್ ಹಾಗೂ ಮೇಕಪ್ ಟ್ರೋಲ್ಗೆ ಗುರಿಯಾಗಿದೆ. ಪ್ರಿಯಾಂಕಾ ಹೇರ್ಸ್ಟೈಲ್ ಹಾಗೂ ಮೇಕಪನ್ನು ಟ್ವಿಟ್ಟಿಗರು ಹಕ್ಕಿಗೂಡಿಗೆ ಹೋಲಿಸಿ ಕಾಲೆಳೆದಿದ್ದಾರೆ.
ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂನಲ್ಲಿ ನಡೆಯುತ್ತಿರುವ ಫ್ಯಾಷನ್ ವೀಕ್ನಲ್ಲಿ ಪತಿ ನಿಕ್ಜೋನ್ಸ್ ಜೊತೆ ಕಾಣಿಸಿಕೊಂಡಿರುವ ಪಿಗ್ಗಿ ತನ್ನ ವಿನೂನತ ಹೇರ್ಸ್ಟೈಲ್ ಹಾಗೂ ಮೇಕಪ್ ಮೂಲಕ ಟ್ವಿಟರ್ನಲ್ಲಿ ಟ್ರೋಲ್ಗೆ ಗುರಿಯಾಗಿದ್ದಾರೆ. ಕೆದರಿರುವ ಕೂದಲಿಗೆ ಡಿಫರೆಂಟಾದ ಕಿರೀಟ ತೊಟ್ಟಿದ್ದ ಪಿಗ್ಗಿಯ ಹೇರ್ಸ್ಟೈಲ್ ಟ್ರೋಲಿಗರ ಆಹಾರವಾಗಿದೆ. ಬಿಳಿಯ ಕಾಡಿಗೆ, ನಸುಗೆಂಪು ತುಟಿರಂಗು, ಉದ್ದನೆಯ ಕಣ್ಣುರೆಪ್ಪೆ, ಪಾರದರ್ಶಕ ಬಟ್ಟೆ ತೊಟ್ಟಿದ್ದ ಪ್ರಿಯಾಂಕಾ, ರೆಡ್ ಕಾರ್ಪೆಟ್ ಮೇಲೆ ಪತಿ ನಿಕ್ ಜಾನ್ಸ್ ಜೊತೆ ನಡೆದು ಬರುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕೆಲವರು ಪಿಗ್ಗಿಯ ಹೇರ್ಸ್ಟೈಲನ್ನು ಹಕ್ಕಿಗೂಡಿಗೆ ಹೋಲಿಸಿದ್ದಾರೆ. ಇನ್ನೂ ಕೆಲವರು ಕಾಗೆಗಳನ್ನು ಓಡಿಸುವ ಬೆದರುಬೊಂಬೆ ಎಂದು ಕಾಲೆಳೆದಿದ್ದಾರೆ. ವೀರಪ್ಪನ್ ಫೋಟೊವನ್ನು ಎಡಿಟ್ ಮಾಡಿ ಮೀಸೆಯ ಜಾಗದಲ್ಲಿ ಪ್ರಿಯಾಂಕಾ ಹೇರ್ ಸ್ಟೈಲ್ ಸೇರಿಸಿ ವ್ಯಂಗ್ಯ ಮಾಡಿದ್ದಾರೆ. ಅಷ್ಟೇ ಅಲ್ಲ, ಸಚಿನ್ ತೆಂಡೂಲ್ಕರ್ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದ ನಂತ್ರ ಅವರ ಹೇರ್ ಸ್ಟೈಲ್ ಕೂಡಾ ಇದೇ ರೀತಿ ಇರುತ್ತೆ ಎಂದು ಟ್ಟಿಟ್ಟಿಗರು ಕಿಚಾಯಿಸಿದ್ದಾರೆ. ಮತ್ತೆ ಕೆಲವರು ಆಧಾರ್ ಕಾರ್ಡ್ ಜೆರಾಕ್ಸ್ನಲ್ಲಿ ನಮ್ಮ ಒರಿಜಿನಲ್ ಪೋಟೊ ಹೀಗೇ ಕಾಣುತ್ತೆ ಎಂದು ಟ್ವೀಟ್ ಮಾಡಿದ್ದಾರೆ.